ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯಾವ ಕವಿಯ ಶೃಂಗಾರ ಕಲ್ಪನೆಯೊ

ಯಾವ ಕವಿಯ ಶೃಂಗಾರ ಕಲ್ಪನೆಯೊ
ಸೌಂದರ್ಯವಲ್ಲಿಯೊ
ದೇವ ಶಿಲ್ಪಿಯ ಅಮರ ಕಲಾಕೃತಿಯೊ ನೀ
ಯಾವ ಕವಿಯ ಶೃಂಗಾರ ಕಲ್ಪನೆಯೊ

ಎಲೆಯ ಮರೆಯ ಸುಂದರ ಕೆಂದಾವರೆಯೊ
ನೆಲದ ಮರೆಯ ನವದಿವ್ಯ ರತುನ ಮಣಿಯೊ
ಮುಗಿಲ ಮರೆಯ ಮಿಂಚಿನ ಭವ್ಯಾಂಗನೆಯೊ
ಜಗದ ಚೆಲುವೆ ಹೆಣ್ಣಾಗಿ ಬಂದ ಸಿರಿಯೊ
ಯಾವ ಕವಿಯ ಶೃಂಗಾರ ಕಲ್ಪನೆಯೊ

ನೀನೆ ನನ್ನ ಶೃಂಗಾರ ರಾಜ್ಯ ರಾಣಿ
ನೀನೆ ನನ್ನ ಭಾವನೆಯ ಭವ್ಯ ವಾಣಿ
ನೀನೆ ನನ್ನ ಪ್ರಣಯಾನಂದದ ಖಣಿಯು
ನೀನೆ ನನ್ನ ಪ್ರೇಮದ ಮುದ್ದಿನ ಗಿಣಿಯು

ಯಾವ ಕವಿಯ ಶೃಂಗಾರ ಕಲ್ಪನೆಯೊ
ಸೌಂದರ್ಯವಲ್ಲಿಯೊ
ದೇವ ಶಿಲ್ಪಿಯ ಅಮರ ಕಲಾಕೃತಿಯೊ ನೀ
ಯಾವ ಕವಿಯ ಶೃಂಗಾರ ಕಲ್ಪನೆಯೊ

ಚಿತ್ರ: ಚಂದ್ರಹಾಸ
ಸಾಹಿತ್ಯ: ಚಿ.ಸದಾಶಿವಯ್ಯ
ಸಂಗೀತ: ಎಸ್.ಹನುಮಂತ ರಾವ್
ಹಾಡಿದವರು: ಘಂಟಸಾಲ, ಬೆಂಗಳೂರು ಲತಾ

ಇಲ್ಲಿ ಕೇಳಿ

Tag: Yaava kaviya shrungara kalpaneyo, Yava kaviya shrungara kalpaneyo

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ