ಆಕಾಶದಾಗೆ ಯಾರೊ ಮಾಯಗಾರನು
ಆಕಾಶದಾಗೆ
ಯಾರೊ ಮಾಯಗಾರನು
ಚಿತ್ತಾರ
ಮಾಡಿ ಹೋಗೊನೇ
ಈ
ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲೆನಾಡ
ಮಾಡಿ ಹೋಗೋನೇ
ಬೆಳ್ಳೀ
ಹಕ್ಕಿಯಾಗಿ, ಹಾರಿ ಹೋಗಿ ನಾವು
ಸಂಚಾರ
ಮಾಡುವ ಬಾರಾ
ಸುದ್ದಿ
ಇಲ್ಲದೇ ಮೋಡ ಶುದ್ಧಿಯಾಗೋದು
ಸದ್ದೇ
ಇಲ್ಲದೇ ಗಂಧ ಗಾಳಿಯಾಗೋದು
ತಂಟೇನೆ
ಮಾಡದೆ ಹೊತ್ಹುಟ್ಟಿ ಹೋಗೊದು
ಏನೇನೂ
ಮಾಡದೆ ನಾವ್ಯಾಕೆ ಬಾಳೋದು?
ಹಾರೋ
ಹಕ್ಕೀನ ತಂದು ಕೂಡಿಹಾಕೊದು
ಕಟ್ಟೋ
ಜೇನನ್ನ ಸುಟ್ಟು ತಿಂದು ಹಾಕೊದು
ನರ
ಮನುಷ್ಯ ಕಲಿಯಲ್ಲ, ಒಳ್ಳೇದು ಉಳಿಸಲ್ಲ
ಅವ
ನಡಿಯೋ ದಾರೀಲಿ ಗರಿಕೇನು ಬೆಳಿಯಲ್ಲ
ಚಿಲಿಪಿಲಿಗಳ
ಸರಿಗಮ ಕಿವಿಯೊಳಗೆ
ನೀರಲೆಗಳ
ತಕಧಿಮಿ ಎದೆಯೊಳಗೆ
ಬೆಳ್ಳೀ ಹಕ್ಕಿಯಾಗಿ, ಹಾರಿ ಹೋಗಿ ನಾವು
ಸಂಚಾರ
ಮಾಡುವ ಬಾರಾ
ಆಕಾಶದಾಗೆ
ಯಾರೊ ಮಾಯಗಾರನು
ಚಿತ್ತಾರ
ಮಾಡಿ ಹೊಗೋನೇ
ಈ
ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲೆನಾಡ
ಮಾಡಿ ಹೋಗೋನೇ
ಕಾಡು
ಸುತ್ತುವಾ ಆಸೆ ರಾಣಿಗೇಕಮ್ಮ
ಕಾಲು
ಇಟ್ಟರೆ ಸುತ್ತ ಕಲ್ಲು ಮುಳ್ಳಮ್ಮ
ಏಳೋದು
ಬೀಳೋದು ಬಡವರ ಪಾಡಮ್ಮ
ನೀವ್ಯಾಕೆ
ಹಾಡೀರಿ, ಈ ಹಳ್ಳಿ ಹಾಡಮ್ಮ
ಇಲ್ಲಿ
ಬೀಸುವಾ ಗಾಳಿ ಊರಲ್ಯಾಕಿಲ್ಲ
ಇಲ್ಲಿ
ಸಿಕ್ಕುವ ಪಾಠ ಶಾಲೆಲ್ಯಾಕಿಲ್ಲ
ಬಂಗಾರ
ಸಿಂಗಾರ, ಸಾಕಾಗಿ ಹೋಯಿತು
ಅರಮನೆ
ಆನಂದ ಬೇಸತ್ತು ಹೋಯಿತು
ಕೆಳಗಿಳಿಸುವ
ಮನಸಿನ ಭಾರಗಳ
ಜಿಗಿಜಿಗಿಯುವ
ಚಿಂತೆಯ ದೂರ್ತಗಳ
ಬೆಳ್ಳೀ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ
ಮಾಡುವ ಬಾರಾ..
ಆಕಾಶದಾಗೆ
ಯಾರೊ ಮಾಯಗಾರನು
ಚಿತ್ತಾರ
ಮಾಡಿ ಹೊಗೋನೇ
ಈ
ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲೆನಾಡ
ಮಾಡಿ ಹೋಗೋನೇ
ಬೆಳ್ಳೀ ಹಕ್ಕಿಯಾಗಿ, ಹಾರಿ ಹೋಗಿ ನಾವು
ಸಂಚಾರ
ಮಾಡುವ ಬಾರಾ
ಚಿತ್ರ: ರಾಮಾಚಾರಿ
ಸಾಹಿತ್ಯ
ಮತ್ತು ಸಂಗೀತ: ಹಂಸಲೇಖ
ಗಾಯನ: ಮನೊ ಮತ್ತು ಎಸ್. ಜಾನಕಿ
Tag: akashadage yava mayagaranu, Akaashadaage yaava maayagaaranu
ಕಾಮೆಂಟ್‌ಗಳು