ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹದಿನಾರರ ವಯಸು


ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು
ಮಾತು ಮಾತಿಗೇಕೋ ನಗು ಮರುಗಳಿಗೆ ಮೌನ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ
ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು

ಸೆರಗು ತೀಡಿದಷ್ಟುಹೊತ್ತು ಹಟಮಾಡುವ ಕೂದಲು
ನಿರಿಯೇಕೋ ಸರಿಯಾಗದು ಮತ್ತೆ ಒಳಗೆ ಹೋದಳು
ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು

ಕೆನ್ನೆ ಕೊಂಚ ಕೆಂಪಾಯಿತೆ ತುಟಿಯ ರಂಗು ಹೆಚ್ಚೇ
ನಗುತ ಅವಳ ಛೇಡಿಸುತಿದೆ ಗಲ್ಲದ ಕರಿ ಮಚ್ಚೆ
ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು

ಬರಿ ಹಸಿರು ಬರಿ ಹೂವು ಎದೆಯೊಳೆಷ್ಟು ಹೆಸರು
ಯಾವ ಮದುವೆ ದಿಬ್ಬಣವೋ ಸುಮ್ಮನೆ ನಿಟ್ಟುಸಿರು
ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು

ಸಾಹಿತ್ಯ: ಎಚ್. ಎಸ್. ವೆಂಕಟೇಶಮೂರ್ತಿ

ಗಾಯನ: ಬಿ. ಆರ್. ಛಾಯಾ



Tag: Hucchu Kodi Manasu 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ