ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗುರುವಾರ ಬಂತಮ್ಮ


ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ 
ಸ್ಮರಣೆಮಾತ್ರದಲಿ ಕ್ಲೇಶಕಳೆದು ಸದ್ಗತಿಯ ಕೊಡುವನಮ್ಮ 

ಯೋಗಿ ಬರುವನಮ್ಮ ಶುಭ ಯೋಗ ಬರುವುದಮ್ಮ 
ರಾಘವೇಂದ್ರ ಗುರುರಾಯ ಬಂದು ಭವರೋಗ ಕಳೆವನಮ್ಮ 
ವಾರ ಬಂತಮ್ಮ ಗುರುವಾರ ಬಂತಮ್ಮ 

ಮನವ ತೊಳೆಯಿರಮ್ಮ ಭಕ್ತಿಯ ಮಣೆಯ ಹಾಕಿರಮ್ಮ 
ಧ್ಯಾನದಿಂದ ಕರೆದಾಗ ಬಂದು ಒಳೆಗಣ್ಣ ತೆರೆವನಮ್ಮ 
ವಾರ ಬಂತಮ್ಮ ಗುರುವಾರ ಬಂತಮ್ಮ 

ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ 
ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ 
ವಾರ ಬಂತಮ್ಮ ಗುರುವಾರ ಬಂತಮ್ಮ  

ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ 
ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ 
ವಾರ ಬಂತಮ್ಮ ಗುರುವಾರ ಬಂತಮ್ಮ 
ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ 
ಸ್ಮರಣೆಮಾತ್ರದಲಿ ಕ್ಲೇಶಕಳೆದು ಸದ್ಗತಿಯ ಕೊಡುವನಮ್ಮ

ಸಾಹಿತ್ಯ: ಚಿ. ಉದಯಶಂಕರ್

Tag: Guruvara Bantamma

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ