ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಿನ್ನೊಲುಮೆ ನಮಗಿರಲಿ ತಂದೆ

ನಿನ್ನೊಲುಮೆ ನಮಗಿರಲಿ ತಂದೆ,
ಕೈ ಹಿಡಿದು ನೀ ನಡೆಸು ಮುಂದೆ

ತಾನುರಿದು ಜಗಕೆಲ್ಲ ಜ್ಯೋತಿಯನು ನೀಡುವ
ದೀಪದೊಳು ನೀನೆನ್ನ ಅನುಗೊಳಿಸು ತಂದೆ
ಕಾನನದ ಸುಮವೊಂದು ಸೌರಭವ ತಾ ಸೂಸಿ 
ಸಫಲತೆಯ  ಪಡೆವಂತೆ ಮಾಡೆನ್ನ ತಂದೆ
ಸಿರಿಯು ಸಂಪದ ಬೇಡ, ಯಾವ ವೈಭವ ಬೇಡ
ನಿನ್ನ ಕರುಣೆಯು ಒಂದೇ ಸಾಕೆಮಗೆ ತಂದೆ

ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು
ಈ ಮನೆಯೂ ಎಂದೆಂದು ನಗುವಂತೆ ನೀ ಮಾಡು
ನಂಬಿದರೆ ಭಯವಿಲ್ಲ, ನಂಬದಿರೆ ಬಾಳಿಲ್ಲ,
ಅಂಬಿಗನೆ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ ಎದೆ ಗುಂದದಿರಲಿ
ಸತ್ಯ ಮಾರ್ಗದೆ ನಡೆವ ಶಕ್ತಿ ಕೊಡು ತಂದೆ

ಚಿತ್ರ: ನಮ್ಮ ಮಕ್ಕಳು
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯನ: ಬಿ. ಕೆ. ಸುಮಿತ್ರಾ, ಪಿ. ಬಿ. ಶ್ರೀನಿವಾಸ್, ಅಂಜಲಿ, ಕೌಸಲ್ಯ


Tag: Ninnolume namagirali tande kai hididu nee nadesu munde


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ