ಪುಟಾಣಿ ನೀಲಿ ಹಕ್ಕಿ
ಪುಟಾಣಿ ನೀಲಿ ಹಕ್ಕಿ
Tag: O putani neeli hakki
ಓ ಪುಟಾಣಿ ನೀಲಿ ಹಕ್ಕಿ ಹಾಡು ಹಾಡು ಹಾಡು ಹಾಡು
ಹಾಡೂ, ಹಾಡೂ
ಚಂದ್ರನು ಬಾನೇ ಬಾನಲ್ಲಿ ಬೆಳದಿಂಗಳು ಈ ಕಾಣಲ್ಲಿ
ಬರಲೇ ಬೇಕು ನೀನಿಲ್ಲಿ, ಹಾರಾಡುವ ಮಾತಿನ
ಮಲ್ಲಿ
ಓ ಪುಟಾಣಿ ನೀಲಿ ಹಕ್ಕಿ ಹಾಡು ಹಾಡು ಹಾಡು ಹಾಡು
ಹಾಡೂ, ಹಾಡೂ
ಅಲೆಯಾಡುತ್ತಿರೆ ಕೊಳದಲ್ಲಿ ತೆನೆ ತೂಗುತ್ತಿರೆ ಹೊಲದಲ್ಲಿ
ಬರಲೇಬೇಕು ನೀನಿಲ್ಲಿ, ಹಾರಾಡುವ ಮಾತಿನ
ಮಲ್ಲಿ
ಓ ಪುಟಾಣಿ ನೀಲಿ ಹಕ್ಕಿ ಹಾಡು ಹಾಡು ಹಾಡು ಹಾಡು
ಹಾಡೂ, ಹಾಡೂ
ಬೆಳ್ಳಕ್ಕಿಗಳಿವೆ ಕರದಲ್ಲಿ, ಗಿಳಿಗಳು ಹತ್ತನೆ ಮರದಲ್ಲಿ
ನೀಲಿಯೊಳಾಡುವ ನೀಲಿಯ ಹಕ್ಕಿ ಬರಲೇ ಬೇಕು ನೀನಿಲ್ಲಿ
ಹಾರಾಡುವ ಮಾತಿನ ಮಲ್ಲಿ
ಓ ಪುಟಾಣಿ ನೀಲಿ ಹಕ್ಕಿ ಹಾಡು ಹಾಡು ಹಾಡು ಹಾಡು
ಹಾಡೂ, ಹಾಡೂ, ಹಾಡೂ, ಹಾಡೂ, ಹಾಡೂ....
ಸಾಹಿತ್ಯ: ಡಾ. ಎಚ್. ಎಸ್. ವೆಂಕಟೇಶಮೂರ್ತಿ
ಕಾಮೆಂಟ್‌ಗಳು