ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೊಸ ಬಾಳಿಗೆ ನೀ ಜೊತೆಯಾದೆ

ಹೊಸ ಬಾಳಿಗೆ ನೀ ಜೊತೆಯಾದೆ
ಹೊಸ ಆನಂದ ನೀನಿಂದು ತಂದೆ
ಹೊಸ ರಾಗ ಹೊಸ ತಾಳ
ಹೊಸ ಭಾವಗೀತೆಯೆ ನೀನಾದೆ

ಹೊಸ ರಾತ್ರಿ ಮೂಡಿಬಂದು
ಹೊಸ ಆಸೆ ನೂರು ತಂದು
ಹೊಸ ಸ್ನೇಹದಿಂದ ಬೆಸೆದು
ಹೊಸ ರಾಗ ಮೀಟಿ ಇಂದು
ಹಿತ ನೀಡಿದೆ ಸುಖ ತೋರಿದೆ
ಮನದಲ್ಲಿ ಉಲ್ಲಾಸ ತಂದು

ನಸುನಾಚಿದಾಗ ಮೊಗವು
ಕೆಂಪಾದ ಹೊನ್ನ ಹೂವು
ನಡೆವಾಗ ನಿನ್ನ ನಡುವು
ಲತೆಯಂತೆ ಆಡೊ ಚೆಲುವು
ಕಣ್ತುಂಬಿತು ಮನತುಂಬಿತು
ಅನುರಾಗ ನನ್ನಲ್ಲಿ ತಂದು

ಹೂಮಂಚ ಹೀಗೆ ಇರಲಿ
ಈ ಮಲ್ಲಿಗೆ ಬಾಡದಿರಲಿ
ಈ ರಾತ್ರಿ ಜಾರದಿರಲಿ
ಹಗಲೆಂದು ಮೂಡದಿರಲಿ
ಬೆಳದಿಂಗಳ ಈ ಬೊಂಬೆ
ಬಳಿಯಲ್ಲಿ ಎಂದೆಂದು ಇರಲಿ

ಚಿತ್ರ: ನಾ ನಿನ್ನ ಬಿಡಲಾರೆ
ಸಾಹಿತ್ಯ: ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಜಾನಕಿ


Tag: Hosa baalige nee joteyade, Hosa balige nee jotheyade

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ