ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ

ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲಿಕಹಿ ಎಲ್ಲ ನನಗಿರಲಿ

ಸಹನೆ ಮೀರಿ ಕಾಣದ ಕೈ ಮಾಡಿತೇನೋ ಮುಯ್ಯಿಗೆ ಮುಯ್ಯಿ
ಯಾರು ಇದಕೆ ಹೊಣೆಯೇ ಇಲ್ಲ ಇರಲಿ ನನಗೆ ನಿಂದನೆ ಎಲ್ಲ
ವಿಧಿ ಹೂಡಿ ಒಳಸಂಚನ್ನು ಒಡೆಯಿತೆನ್ನ ಹೊಂಗನಸನ್ನು
ನೋವ ನುಂಗಿ ಬಾಳುವೆ ನಾನು ಸುಖವು ನಿನ್ನ ಕಾಡಿತೇನು
ಈ ಬೇಗೆ ನೀಗಲಿ ಮನಸು ಹಗುರವಾಗಲಿ
ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ

ಏನೇನೊ ಬಯಸಿತು ಮನಸು ಕೈ ಸೇರೆ ಎಲ್ಲಾ ಸೊಗಸು
ಕೈ ಜಾರೆ ಎಲ್ಲಾ ಕನಸು ಆಸೆ ಮರೆತರೇ ಲೇಸು
ನನ್ನ ಕಣ್ಣ ನೀರಿನಲ್ಲಿ ನಿನ್ನ ಬಿಂಬ ಕಾಣುತಿರಲಿ
ಈ ಬಾಳು ಇಂತೆ ಇರಲಿ ನಿನ್ನ ನೆನಪು ಚಿರವಾಗಿರಲಿ
ಈ ಬೇಗೆ ನೀಗಲಿ ಮನಸು ಹಗುರವಾಗಲಿ
ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ
ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲಿ
ಕಹಿ ಎಲ್ಲ ನನಗಿರಲಿ

ಚಿತ್ರ: ಬಂಗಾರದ ಹೂವು
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ರಾಜನ್ ಮತ್ತು ನಾಗೇಂದ್ರ
ಗಾಯನ: ಪಿ ಸುಶೀಲ ಮತ್ತು ಎಸ್ ಜಾನಕಿ


Tag: Nee nadeva haadiyalli nage hoovu baadadirali

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ