ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತ್ರಿಭುವನ ಜನನಿ ಜಗನ್ಮೋಹಿನಿ


ತ್ರಿಭುವನ ಜನನಿ ಜಗನ್ಮೋಹಿನಿ
ಅಭಯಪ್ರದಾಯಿನಿ ಪಾವನಿ ಪಾಹಿಮಾಂ
ತ್ರಿಭುವನ ಜನನಿ ಜಗನ್ಮೋಹಿನಿ

ಕರುಣಾಕರಿ ಶಂಕರಿ
ದೇವಿ ಪಾವನಿ ಪರಮೇಶ್ವರಿ ದಯಾಮಯಿ
ತ್ರಿಭುವನ ಜನನಿ ಜಗನ್ಮೋಹಿನಿ

ಹರಸತಿ ಕಲ್ಯಾಣಿ ಪರಶಿವೆ ಫಣಿವೇಣಿ
ಸ್ಮರಹರ ನಿಜರಾಣಿ ಪರಮಪೂರ್ಣಮಣಿ
ವಾರಿಜಸಂಜಾತೆ ವಾಂಛಿತ ಫಲದಾತೆ
ವರಶುಭಗಾತ್ರೇ ನೀರಜನೇತ್ರೇ
ಸುರನರ ಸೇವಿತೆ ಗಿರಿಜೆ ಪರಂಜ್ಯೋತಿ
ವಾರಿಜಸಂಮಾತೆ ಸುಜನ ಸಂಪ್ರೀತೆ
ತ್ರಿಭುವನ ಜನನಿ ಜಗನ್ಮೋಹಿನಿ
ಅಭಯಪ್ರದಾಯಿನಿ ಪಾವನಿ ಪಾಹಿಮಾಂ
ತ್ರಿಭುವನ ಜನನಿ ಜಗನ್ಮೋಹಿನಿ

ಚಿತ್ರ: ಪ್ರೇಮದ ಪುತ್ರಿ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಎಚ್. ಆರ್. ಪದ್ಮನಾಭಶಾಸ್ತ್ರಿ
ಗಾಯನ: ಪಿ. ಲೀಲಾ




Tag: Tribhuvana janani jaganmohini, Thribhuvana Janani jaganmohini

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ