ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮುದ್ದು ತಾರೋ ರಂಗ ಎದ್ದುಬಾರೋ


ಮುದ್ದು ತಾರೋ ರಂಗ ಎದ್ದುಬಾರೋ
ಅಂದವಾದ ಕರ್ಪೂರದ ಕರಡಿಗೆಯ ಬಾಯಲೊಮ್ಮೆ
ಮುದ್ದು ತಾರೋ ರಂಗ ಎದ್ದುಬಾರೋ

ವಿಷವನುಣಿಸಲು ಬಂದ ಅಸುರೆ ಪೂತನಿಯ ಕೊಂದ
ವಶವಲ್ಲವೋ ಮಗನೆ ನಿನ್ನ ವಿಷವನುಂಡ ಬಾಯಲೊಮ್ಮೆ
ಮುದ್ದು ತಾರೋ ರಂಗ ಎದ್ದುಬಾರೋ

ಕಡೆವ ಸಮಯಕೆ ಬಂದು ಕಡೆವ ಸತಿಯ ಕಯ್ಯ ಪಿಡಿದು
ಕಡೆವ ಬೆಣ್ಣೆ ಮೊಸರನೆಲ್ಲ ಒಡನೆ ಮೆದ್ದ ಬಾಯಲೊಮ್ಮೆ
ಮುದ್ದು ತಾರೋ ರಂಗ ಎದ್ದುಬಾರೋ

ತೊರವೆಯ ನರಸಿಂಹ ವರದ ಪುರಂದರವಿಠ್ಠಲ
ಹರವಿ ಹಾಲನೆಲ್ಲ ಕುಡಿದ ನೊರೆ ಹಾಲಿನ ಬಾಯಲೊಮ್ಮೆ
ಮುದ್ದು ತಾರೋ ರಂಗ ಎದ್ದುಬಾರೋ

ಸಾಹಿತ್ಯ: ಪುರಂದರದಾಸರು

Tag: Muddu Taaro Ranga Eddu Baaro, Muddu Taro Ranga Eddu Baro

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ