ಒಡಲೆಂಬ ಗುಡಿಯೊಳಗೆ
ಒಡಲೆಂಬ
ಗುಡಿಯೊಳಗೆ ಒಡೆಯನೆನ್ನವನಿಹನು
ನಡೆಯುವೆನು
ನಡೆಸಿದಂತವನು ಕೈ ಬಿಡನು
ಬಡವ
ತಬ್ಬಲಿ ಎಂದು ಚಡಪಡಿಸದಿರು ನೀನು
ಕೊಡುವಾತ
ಬಿಡುವಾತ ನನ್ನ ಒಳಗಿಹನು
ನಾನೇ
ಆಡಿದ ನನ್ನ ಕೋಡಂಗಿ ಆಟವನು,
ನೋಡಿ
ಕೈ ಪರೆಗುದ್ದಿ ನಕ್ಕವನು ಅವನು.
ನನ್ನ
ಹಿಂದೆಯೇ ಇದ್ದು ನಾ ಬಿದ್ದೆ ಎಂದಾಗ
ಬಂದೆತ್ತಿ
ಕಣ್ಣೊರಸಿ ನಗಿಸಿದವನವನು
ನನ್ನೊಡಲೊಲಿರ್ಪಾತ
ನಾ ತಾನೇ ಸದಾಶಿವನು
ಕ್ಷೇಮಕಾರಕ
ಮೂರ್ತಿ ನನಗೆಂದೂ ಅವನು
ನನ್ನ
ಜೀವನ ರಥದ ವಿಜಯದ ಮಹೋತ್ಸವಕೆ
ತಾನೇ
ಸಾರಥಿಯಾಗಿ ನಡೆಸುವನು ಜಯಕೆ
ಒಡಲೆಂಬ
ಗುಡಿಯೊಳಗೆ ಒಡೆಯನೆನ್ನವನಿಹನು
ನಡೆಯುವೆನು
ನಡೆಸಿದಂತವನು ಕೈ ಬಿಡನು
ಸಾಹಿತ್ಯ: ಎಸ್.ವಿ. ಪರಮೇಶ್ವರ ಭಟ್ಟ
Tag: Odalemba Gudiyolage
ಕಾಮೆಂಟ್‌ಗಳು