ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯಾವ ದುಂಬಿಗೆ ಯಾವ ಹೂವು

ಯಾವ ದುಂಬಿಗೆ ಯಾವ ಹೂವು
ಯಾವ ಜಾಣ ಹೇಳುವ
ಯಾರು ಅರಿಯರು ಯಾವ ಹೂವು
ಬೆರೆವುದೊ ನಿನ್ನ ಚರಣವ
ಯಾವ ದುಂಬಿಗೆ ಯಾವ ಹೂವು
ಯಾವ ಜಾಣ ಹೇಳುವ

ಯಾರ ಕೊರಳಲಿ ಯಾವ ಇಂಪನು
ಗುರುವೆ ನೀನಿರಿಸಿರುವೆಯೊ
ಯಾರ ಮನದಲಿ ಯಾವ ಗುಣವನು
ತಂದೆ ನೀ ಬೆರೆಸಿರುವೆಯೊ
ಯಾರ ಬಾಳಲಿ ಕರುಣೆಯಿಂದ
ನೆಮ್ಮದಿಯ ತುಂಬಿರುವೆಯೊ
ನೆಮ್ಮದಿಯ ತುಂಬಿರುವೆಯೊ

ಯಾರು ಬಲ್ಲರು ಯಾರ ಪ್ರೇಮಕೆ
ಸೋತು ನೀನು ಒಲಿವೆಯೊ
ಯಾರು ಅರಿಯರು ಯಾರ ಕೂಗಿಗೆ
ನೀನು ಧಾವಿಸಿ ಬರುವೆಯೊ
ಯಾರ ಹೃದಯದ ಗುಡಿಯಲೆಂದು
ಜ್ಯೋತಿ ನೀನಾಗಿರುವೆಯೊ
ಜ್ಯೋತಿ ನೀನಾಗಿರುವೆಯೊ

ಕೋಟಿ ಜನುಮವು ಸಾಲದಾಗಿದೆ
ಗುರುವೆ ನಿನ್ನ ಅರಿಯಲು
ದಾರಿ ಕಾಣದೆ ರಾಘವೇಂದ್ರನೆ
ನಿನ್ನ ನಾನು ಸೇರಲು
ನಿನ್ನ ಕೂಗಿದೆ ಕಂಗಳು
ಬಂದು ನಿಲ್ಲೆಯ ಮನದೊಳು
ಬಂದು ನಿಲ್ಲೆಯ ಮನದೊಳು

ಸಾಹಿತ್ಯ: ಚಿ. ಉದಯಶಂಕರ್


Tag: Yava Dumbige yava huvu, Yava Dhumbige Yaava Hoovu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ