ನನ್ನ ಇನಿಯನ ನೆಲೆಯ
ನನ್ನ ಇನಿಯನ ನೆಲೆಯ ಬಲ್ಲೆ ಏನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ
ಇರುವೆ ಸರಿಯುವ ಸದ್ದು
ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳುವ ನಲ್ಲ
ನನ್ನ ಮೊರೆಯನು ಏಕೆ ಕೇಳಲೊಲ್ಲ
ಗಿರಿಯ ಎತ್ತಲು ಬಲ್ಲ
ಶರದಿ ಬಗ್ಗಿಸ ಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲ್ಲಿಸಬಲ್ಲ
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ
ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆಬಿತ್ತು ತೆನೆಯತ್ತು ತೂಗುವವನು
ನಲ್ಲೆ ಅಳಲನು ಏಕೆ ತಿಳಿಯನವನು
ಸಾಹಿತ್ಯ: ಎನ್. ಎಸ್. ಲಕ್ಷ್ಮೀನಾರಾಯಣ ಭಟ್
Photo Courtesy: http://radhekrishnasatsangam.blogspot.in
Tag: Nanna iniyana nelya balleyene
Tag: Nanna iniyana nelya balleyene
ಕಾಮೆಂಟ್‌ಗಳು