ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಗದೀಶ ಸರ್ವೇಶ ಮಲ್ಲೇಶ ಗೌರೀಶ

ಜಗದೀಶ ಸರ್ವೇಶ ಮಲ್ಲೇಶ ಗೌರೀಶ
ನೂರಾರು ಹೆಸರೂ ಶಿವನೀಗೆ
ನೂರಾರು ಹೆಸರು ನಂಜುಂಡೇಶ್ವರನಿಗೆ
ಇರುವಾನು ನೆನೆದೋರ ಮನದಾಗೆ

ಮೊಗ್ಗಲಿ ಕುಳಿತೌನೆ ಹೂವಲ್ಲಿ ನಗುತಾನೆ
ಮಾಯಾಗಿಹಾಯಾಗಿ ಮಲಗೌನೆ;
ಮಾಯಾಗಿಹಾಯಾಗಿ ಮಲಗೌನೆ ಮಾದೇವ
ಮನಸಿಟ್ಟು ಕೂಗಲು ಬರುತಾನೆ

ಗಿಳಿಯಲ್ಲಿ ಹಸಿರಾಗಿ ನವಿಲಲ್ಲಿ ಕಣ್ಣಾಗಿ
ಕೋಗಿಲೆ ದನಿಯಾ ಇಂಪಾಗಿ;
ಕೋಗಿಲೆ ದನಿಯಾ ಇಂಪಾಗಿ
ಕೇಳೋರ ಮನಸೀಗೆ ತಂದಾನೇ ಆನಂದ

ಕಲ್ಲಲ್ಲಿ ಮುಳ್ಳಲ್ಲಿ ಗಾಳೀಲೀ ನೀರಲ್ಲಿ
ಎಲ್ಲೆಲ್ಲೂ ನಮ್ಮ ಶಿವನುಂಟು;
ಎಲ್ಲೆಲ್ಲೂ ನಮ್ಮ ಶಿವನುಂಟು
ಜಗದಲ್ಲಿ ಶರಣಾರಿಗೆ ಕಾಣೋ ಕಣ್ಣುಂಟು

ಚಿತ್ರ: ಬದುಕು ಬಂಗಾರವಾಯ್ತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯನ: ಎಸ್. ಜಾನಕಿ



Tag: Jagadisha sarvesha gourisha mallesha, Jagadeesha sarvesha gowrisha mallesha



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ