ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಂದೇ ಬರತಾವ ಕಾಲ


ಬಂದೇ ಬರತಾವ ಕಾಲ
ಮಂದಾರ ಕನಸನು
ಕಂಡಂತ ಮನಸನು
ಒಂದು ಮಾಡುವ ಸ್ನೇಹ ಜಾಲ
ಬಂದೇ ಬರುತಾವ ಕಾಲ

ಮಾಗಿಯ ಎದೆ ತೂರಿ
ಕೂಗಿತೊ ಕೋಕಿಲ
ರಾಗದ ಚಂದಕೆ
ಬಾಗಿತೊ ಬನವೆಲ್ಲ
ತೂಗುತ ಬಳ್ಳಿ ಮೈಯನ್ನ
ಸಾಗದು ಬಾಳು ಏಕಾಕಿ ಎನುತಾವ
ಬಂದೇ ಬರತಾವ ಕಾಲ

ಹುಣ್ಣಿಮೆ ಭಾನಿಂದ
ತಣ್ಣನೆ ಸವಿ ಹಾಲು
ಚೆಲ್ಲುತ ಮೆಲ್ಲನೆ
ನಲಿಸಿದೆ ಭುವಿಯನು
ಮುಸುಕಿದೆ ಮಾಯೆ ಜಗವನು
ಭುವಿ ಭಾನು ಸೇರಿ
ಹರಸಾವು ಬಾಳನು
ಬಂದೇ ಬರತಾವ ಕಾಲ

ಚಿತ್ರ: ಸ್ಪಂದನ
ಸಾಹಿತ್ಯ: ಎನ್. ಎಸ್ ಲಕ್ಷ್ಮೀನಾರಾಯಣ ಭಟ್ಟ
ಸಂಗೀತ: ಸಿ. ಅಶ್ವಥ್
ಗಾಯನ: ಪಿ. ಸುಶೀಲ



Tag: bande baratava kaala, bande barataava kaala


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ