ಜಗದೀಶನಾಡುವ ಜಗವೇ ನಾಟಕರಂಗ
ಜಗದೀಶನಾಡುವ ಜಗವೇ ನಾಟಕರಂಗ
ಸಂಚಾರಿ ನಾನಾಗಿ ಕಾಣುವಾ
ಜಗದೀಶನಾಡುವ ಜಗವೇ ನಾಟಕರಂಗ
ಸರಿಸಮ ತಮಗೇ, ಯಾರಿಹರೆನುವರೇ,
ಮೆರೆಯುತ ಭರದೇ ಅಪಜಯ ಪಡೆಯೇ
ನಾದದ ಮೊದವ ಬೀರುವಾ
ಜಗದೀಶನಾಡುವ ಜಗವೇ ನಾಟಕರಂಗ
ಡಾಂಭಿಕ ಜನರಾ ಡಂಭವನಳಿಸೀ,
ಧಾರ್ಮಿಕ ಜನರಾ ಕೀರ್ತಿಯ ಮೆರೆಸೀ
ನ್ಯಾಯದ ನಾಂದಿಯ ಹಾಡುವಾ
ಜಗದೀಶನಾಡುವ ಜಗವೇ ನಾಟಕರಂಗ
ಸತ್ಯಸ್ವರೂಪದ ದೀಪವ ಬೆಳಗಲು
ನಿತ್ಯ ಭಾವದ ರೂಪವನಳಿಸಲು
ನೀತಿಯ ನೋಟವ ತೊರುವಾ
ಜಗದೀಶನಾಡುವ ಜಗವೇ ನಾಟಕರಂಗ
ಚಿತ್ರ: ಶ್ರೀ ರಾಮಾಂಜನೇಯ ಯುದ್ಧ
ಸಾಹಿತ್ಯ: ಗೀತಪ್ರಿಯ
ಸಂಗೀತ: ಸತ್ಯಂ
ಗಾಯನ: ಪಿ. ಬಿ. ಶ್ರೀನಿವಾಸ್
Tag: Jagadeeshanaduva jagave nataka ranga
ಕಾಮೆಂಟ್‌ಗಳು