ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಂತಿಂಥ ಹೆಣ್ಣು ನೀನಲ್ಲ


ಅಂತಿಂಥ ಹೆಣ್ಣು ನೀನಲ್ಲ;
ನಿನ್ನಂಥ ಹೆಣ್ಣು ಇನ್ನಿಲ್ಲ.
     
ಹೆಡೆ ಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ ಹೂವು ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!
ಅಂತಿಂಥ ಹೆಣ್ಣು....

ಮಣಿಮಾಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ,
ಒತ್ತಾಯವಿಲ್ಲ; ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.
ಅಂತಿಂಥ ಹೆಣ್ಣು...

ಎದೆ ಮಟ್ಟ ನಿಂತ ಹೂಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!
ಅಂತಿಂಥ ಹೆಣ್ಣು ...

ನಡುಬೆಟ್ಟದಲ್ಲಿ  ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು,
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ, ಸಿರಿವಂತೆ.
ಅಂತಿಂಥ ಹೆಣ್ಣು ...

ನಡುದಾರಿಯಲ್ಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು.
ಮುನ್ನೂರು ಮಿಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.
ಅಂತಿಂಥ ಹೆಣ್ಣು...

ಬಲು ದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.
ಅಂತಿಂಥ ಹೆಣ್ಣು....


ಬಲುದೂರ ದೂರ ನೀನಾಗಿ,

ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.
ಅಂತಿಂಥ ಹೆಣ್ಣು....

ಏನಂಥ ಚೆಲುವೆ ನೀನಲ್ಲ,
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ; -
ನಿನ್ನಿಂದ ಹಾಡು ಕನಸೆಲ್ಲ.
ಅಂತಿಂಥ ಹೆಣ್ಣು....

ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ
ಚಿತ್ರ: ತುಂಬಿದ ಕೊಡ
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಪಿ. ಕಾಳಿಂಗರಾವ್


ಚಿತ್ರಕಾರರು: ಪ್ರಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ
ಚಿತ್ರಕೃಪೆ: greatinspire.com

Tag: Antintha Hennu Neenalla

ಕಾಮೆಂಟ್‌ಗಳು

  1. ನೆನ್ನೆಯಷ್ಟೇ ಈ ಹಾಡು ಕೇಳಿದೆ... ತುಂಬಾ ಇಷ್ಟ ಆಯ್ತು.. ಸೊಗಸಾದ ಪದ ಬಳಕೆ... ಲಿರಿಕ್ಸ್ ಹಾಕಿದ್ದಕ್ಕೆ ನನ್ನೀ... _/\_

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ