ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಂದ ತನಯ ಗೋವಿಂದನ


ನಂದ ತನಯ ಗೋವಿಂದನ ಭಜಿಸುವ ಆನಂದವಾದ ಮಿಠಾಯಿ 

ಬಂಧಗಳನು ಭವ ರೋಗಗಳೆಲ್ಲನು ನಿಂದಿಪುದು ಈ ಮಿಠಾಯಿ

ದಧಿ ಘೃತ ಕ್ಷೀರಂಗಳಿಗಿಂತಲೂ ಬಹು ಅಧಿಕವಾದ ಮಿಠಾಯಿ
ಕದಳೀ ದ್ರಾಕ್ಷಿ ಖರ್ಜೂರ ರಸಗಳನು ಮೀರುವುದು ಈ ಮಿಠಾಯಿ

ಪಂಚ ಭಕ್ಷ್ಯಂಗಳ ಷಡ್ರಸಾನ್ನಗಳ ಮಿಂಚಿದಂಥ ಮಿಠಾಯಿ
ಕಂಚೀಶನೆ ರಕ್ಷಿಸು ಎಂದುಸುರುವರ ಅಂಜಿಕೆ ಬಿಡಿಪ ಮಿಠಾಯಿ 

ಜಪ ತಪ ಸಾಧನಗಳಿಗಿಂತಲೂ ಬಹು ಅಪರೂಪದ ಮಿಠಾಯಿ
ಜಿಪುಣ ಮತಿಗಳಿಗೆ ಸಾಧ್ಯವಲ್ಲದಿಹ ಪುರಂದರ ವಿಠಲ ಮಿಠಾಯಿ




ಸಾಹಿತ್ಯ: ಪುರಂದರದಾಸರು

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ