ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೃಂದಾವನದಲಿ ಯೋಗನಿದ್ರೆಯಲಿ


ಬೃಂದಾವನದಲಿ ಯೋಗನಿದ್ರೆಯಲಿ ಇರುವಾ ಗುರುರಾಯ
ಬೆಳ್ಳಿ ಮೂಡುತಿದೆ,  ಬಾನು ಹೊಳೆಯುತಿದೆ, ಏಳೂ ಮಹನೀಯ,
ಕಣ್ತೆರೆದು ಏಳೂ  ಗುರುರಾಯ

ಹೊನ್ನ ತೇರಿನಲಿ,  ಕುಳಿತು ಬಾನಿನಲಿ,  ಸೂರ್ಯನು ಬರುತಿರುವ
ಕೋಟಿ ಸೂರ್ಯರ ಕಾಂತಿ ತುಂಬಿರುವ, ನಿನ್ನ ಕಾಣಲಿರುವ
ಗುರುವೇ ತೋರು ನಿನ್ನ  ಮೊಗವ

ತುಂಗೆ ಬಂದಿಹಳು, ಗಂಗೆ ತಂದಿಹಳು, ಪಾದವಾ ತೊಳೆಯುವಳು
ನಿನ್ನ  ಪೂಜಿಸಲು, ಚರಣ ಸೇವಿಸಲು, ಅರಳಿವೇ ಕಮಲಗಳು
ಮಂತ್ರವ ಹೇಳಿವೇ ಭ್ರಮರಗಳು

ಉದಯರಾಗವನು ಉಷೆಯು ಹಾಡುವಳು,  ಆರತಿ ಬೆಳಗುವಳು
ನಿನ್ನ ಕಣ್ಣುಗಳ  ಬೆಳಕು ಬೀಳದೆ,  ಬೆಳಗದೆಮ್ಮ ಬಾಳು
ಗುರುವೇ ರಾಘವೇಂದ್ರ  ಏಳು

ಸಾಹಿತ್ಯ:  ಚಿ.  ಉದಯಶಂಕರ
ಗಾಯನ:  ಡಾ. ರಾಜ್ ಕುಮಾರ್

Tag: Brindavanadali Yoga nidreyali,  Brundavanadali Yoga Nidreyalee







ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ