ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲಿಯನಾರ್ಡೊ ಡಿಕ್ಯಾಪ್ರಿಯೋ


 ನಮ್ಮ ಟೈಟಾನಿಕ್ ಹುಡುಗನ  ಹುಟ್ಟುಹಬ್ಬ


ಇಂದು ಟೈಟಾನಿಕ್ ಹುಡುಗ ಲಿಯನಾರ್ಡೊ ಡಿ ಕ್ಯಾಪ್ರಿಯೋ ಹುಟ್ಟುಹಬ್ಬ.  ಸುಂದರ ಯುವಕ, ಉತ್ತಮ ನಟ,  ನಿರ್ಮಾಪಕ ಮತ್ತು ನಿಷ್ಟಾವಂತ ಪರಿಸರವಾದಿಯಾದ   ಲಿಯನಾರ್ಡೊ ಡಿ ಕ್ಯಾಪ್ರಿಯೋ   1993ರಲ್ಲಿ ಬಂದ  ‘ವಾಟ್ ಈಸ್ ಈಟಿಂಗ್ ಗಿಲ್ಬರ್ಟ್ ಗ್ರೇಪ್’ ಮತ್ತು 1997ರಲ್ಲಿ  ವಿಶ್ವದೆಲ್ಲೆಡೆ  ಖ್ಯಾತಗೊಂಡ ‘ಟೈಟಾನಿಕ್’ ಚಿತ್ರಗಳಲ್ಲಿ  ಅಭಿನಯಿಸಿದ  ದಿನಗಳಿಂದ  ಮೊದಲ್ಗೊಂಡು  ಪ್ರತೀ ವರ್ಷ  ಒಂದಿಲ್ಲೊಂದು ಉತ್ತಮ ಚಿತ್ರದಲ್ಲಿ ಅಭಿನಯಿಸುತ್ತಾ ಬಂದಿದ್ದು, 2016ರ ವರ್ಷದಲ್ಲಿ ‘ದಿ ರೆವನೆಂಟ್’  ಚಿತ್ರಕ್ಕೆ  ಆಸ್ಕರ್ ಪ್ರಶಸ್ತಿ ಸಹಾ ಸ್ವೀಕರಿಸಿದರು.  

ದಿ ರೆ ದಿ ಮ್ಯಾನ್ ಇನ್ ದಿ ಐರನ್ ಮಾಸ್ಕ್ (1998), ಕ್ಯಾಚ್ ಮಿ ಇಫ್ ಯು ಕ್ಯಾನ್(2002), ಗ್ಯಾಂಗ್ಸ್ ಆಫ್ ನ್ಯೂಯಾರ್ಕ್(2002), ದಿ ಏವಿಯೇಟರ್ (2004), ಬ್ಲಡ್ ಡೈಮಂಡ್ (2006), ಬಾಡಿ ಆಫ್ ಲೈಸ್ (2008), ರೆವಲ್ಯೂಷನರಿ ರೋಡ್ (2008), ಷ’ಟರ್ ಐಲ್ಯಾಂಡ್ (2010), ಇನ್ಸೆಪ್ಷನ್ (2010), ಜೆ ಎಡ್ಗರ್ (2011), ಜಾಂಗೋ ಅನ್ ಚೈನ್ಡ್ (2012), ದಿ ಗ್ರೇಟ್ ಗ್ಯಾಸ್ಬಿ (2013), ದಿ ವುಲ್ವ್ ಆಫ್  ವಾಲ್ ಸ್ಟ್ರೀಟ್ (2013), ದಿ ರೆವನೆಂಟ್(2016), ಬಿಫೋರ್ ದಿ ಫ್ಲಡ್ (2016), ಐಸ್ ಆನ್ ಫೈರ್ (2019), ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್ (2019) ಹೀಗೆ  ನಿರಂತರವಾಗಿ  ಜನಪ್ರಿಯತೆಯ ಜೊತೆ ಜೊತೆಗೆ ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿ  ಅಭಿನಯ ನೀಡುತ್ತಾ ಬಂದಿರುವ  ಲಿಯನಾರ್ಡೊ ಡಿ ಕ್ಯಾಪ್ರಿಯೋ, ತನ್ನ ಸಿನಿಮಾಗಳ ಆಯ್ಕೆಯಲ್ಲಿ ವೈವಿಧ್ಯತೆಯನ್ನು ನಿರಂತರವಾಗಿ ಕಾಯ್ದುಕೊಂಡು ಬಂದಿರುವ ಅಪರೂಪದ ನಟ.

ವಿಶ್ವದೆಲ್ಲೆಡೆ  ತನ್ನ ಸೌಂದರ್ಯ ಮತ್ತು ನಟನೆಗಳಿಂದ  ಸಂಮೋಹಗೊಳಿಸಿರುವ  ‘ಲಿಯೋ’ಗೆ  ಬದುಕು ಸುಂದರವಾಗಿರಲಿ.  ಆತನಿಂದ ಒಳ್ಳೆಯ ಅಭಿನಯದ ಚಿತ್ರಗಳು ನಿರಂತರವಾಗಿ ಮೂಡಿಬರುತ್ತಿರಲಿ.  

On the birth day of my favorite hero Lenardo DiCaprio...

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ