ಈಜ್ಞಾನ ಹೊಸ ರೂಪದಲ್ಲಿ
ನಮ್ಮ ಟಿ.ಜಿ.ಶ್ರೀನಿಧಿಯ 'ejnana.com' ಬಂದಿದೆ ಹೊಸ ರೂಪದಲ್ಲಿ
ನಮ್ಮ ಟಿ.ಜಿ. ಶ್ರೀನಿಧಿ ಇದಾನಲ್ಲ ಅವನದ್ದೊಂದು ವಿಶಿಷ್ಟ ಹಾದಿ. ಎಲ್ಲ ಮಕ್ಕಳೂ ನಾವು ಇಂಗ್ಲಿಷ್ ಶಾಲೆಗೆ ಹೋಗ್ತೀವಿ ಅಂದ್ರೆ, ನಾನು ತನ್ನ ಶ್ರೀಮಂಗಲ ಗ್ರಾಮದ ಕನ್ನಡ ಮಾಧ್ಯಮ ಶಾಲೆಯಲ್ಲೇ ಓದೋದು ಅಂದ. ಕನ್ನಡ ಮೀಡಿಯಂ ಓದಿದವರು ಹೆಚ್ಚು ಏನು ಓದುಕ್ಕಾಗುತ್ತೆ ಅಂತ ಅನ್ನೋ ಸಮಯದಲ್ಲಿ ಬಿಇ, ಎಂಟೆಕ್ ಮಾಡ್ದಾ. ಈ ಇಂಜಿನಿಯರಿಂಗ್ ಓದೋ ಹುಡುಗರಿಗೆ ಕನ್ನಡ ಗೊತ್ತಿದ್ಯಾ ಅನ್ನೋ ಕಾಲದಲ್ಲೇ ಪತ್ರಿಕೆಗಳಲ್ಲಿ ಸಹಸ್ರಾರು ಲೇಖನಗಳನ್ನು ಬರೆದಿದ್ದ. ಕನ್ನಡದಲ್ಲಿ ತಂತ್ರಜ್ಞಾನವನ್ನು ಸರಿಯಾಗಿ ಅಭಿವ್ಯಕ್ತಿಸೋದು ಸಾಧ್ಯವೇ ಇಲ್ಲ ಅನ್ನೋ ಕಾಲದಲ್ಲಿ ತಂತ್ರಜ್ಞಾನವನ್ನು ಹೇಗೆ ಕನ್ನಡದಲ್ಲಿ ಸುಲಲಿತವಾಗಿ ಬಳಸಬಹುದು ಮತ್ತು ತಂತ್ರಜ್ಞಾನ ಅಕಾಡೆಮಿ ಬಹುಮಾನಕ್ಕೂ ಅರ್ಹನಾದ. ಆತ ಮಾಡಿದ ಕನ್ನಡದ ಬ್ಲಾಗ್ e-ಜ್ಞಾನ ಅತ್ಯುತ್ತಮ ಬ್ಲಾಗುಗಳಲ್ಲಿ ಒಂದು ಎಂದು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಎಂದು ಮನದಟ್ಟಾಗುವಂತಹ ತಂತ್ರಜ್ಞಾನ ಕುರಿತಾದ ಪುಸ್ತಕಗಳನ್ನು ಕನ್ನಡದಲ್ಲಿ ಬರೆದ. ವಿಜ್ಞಾನ ಗಳಿಸಿತು. ಇದೆಲ್ಲ ಮಾಡಿದ ಈತ ತನ್ನ ಐಟಿ ಕೆಲಸ ಬಿಟ್ಟುಬಿಟ್ನ. ಖಂಡಿತ ಇಲ್ಲ ಆತ ಅಂತರರಾಷ್ಟ್ರೀಯ ಐಟಿ ಸಂಸ್ಥೆಯಲ್ಲಿ ಅಧಿಕಾರಿ ಕೂಡಾ. ಸಾಮಾಜಿಕ ಕಾಳಜಿಯಿಂದ ಊರೂರಿನ ಶಾಲೆ ಶಾಲೆಗಳಿಗೆ ಹೋಗಿ ಮಕ್ಕಳಿಗೆ ತಂತ್ರಜ್ಞಾನವನ್ನು ಅರ್ಥವಾಗುವಂತೆ ಕನ್ನಡದಲ್ಲಿ ಹೇಳುತ್ತಿದ್ದಾನೆ. e-ಜ್ಞಾನ ಟ್ರಸ್ಟ್ ಸ್ಥಾಪಿಸಿ ಬಡಮಕ್ಕಳಿಗೆ ಪುಸ್ತಕಗಳನ್ನು ತಲುಪಿಸುತ್ತಿದ್ದಾನೆ, ತಂತ್ರಜ್ಞಾನದಿಂದ ಭಾಷೆಯ ಉಪಯೋಗವನ್ನು ಹೇಗೆ ಉತ್ತಮಪಡಿಸಬಹುದು ಎಂಬ ಬಗ್ಗೆ ಎಲ್ಲೆಡೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾನೆ. ನಮ್ಮ ಕನ್ನಡದಲ್ಲಿ ಉತ್ತಮ ತಂತ್ರಜ್ಞಾನ ಬಳಕೆಯ ಅಂತರಜಾಲ ವ್ಯವಸ್ಥೆ ಸಾಧ್ಯವೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡಬಹುದಾದಷ್ಟು ಸುಸಜ್ಜಿತ ತಂತ್ರಜ್ಞಾನ ಬಳಕೆ ಮಾಡಿ ತನ್ನ ejnana.com ಆನ್ನು ಆಧುನಿಕಗೊಳಿಸಿ ಕನ್ನಡಿಗರಿಗೆ ಅರ್ಪಿಸಿದ್ದಾನೆ. ಕನ್ನಡ ಭಾಷೆಯ ಅಭಿಮಾನವನ್ನು ಕೇವಲ ಘೋಷಣೆ ಮಾಡಿಕೊಂಡು ದಿನಬೆಳಗಾದರೆ ಸ್ವಾರ್ಥಕ್ಕೋಸ್ಕರ ಹೋರಾಡುವ ಮಂದಿಯಿಂದ ಕನ್ನಡ ಉಳಿದು ಬೆಳೆಯುವುದು ಸಾಧ್ಯವಿಲ್ಲ. ಅದಕ್ಕೆ ಆಸಕ್ತ ಶ್ರದ್ಧೆ ಬೇಕು. ಅಂತಹ ಶ್ರದ್ಧೆ ನಮ್ಮ ಟಿ.ಜಿ. ಶ್ರೀನಿಧಿಯ ಸೃಜನಶೀಲ ಕಾರ್ಯಗಳಲ್ಲಿದೆ. ಶ್ರೀನಿಧಿಯ ಈ ಹೊಸ ಅಭಿವೃದ್ಧಿಶೀಲ www.ejnana.com ಗೆ ಸುಸ್ವಾಗತ, ಅಭಿನಂದನೆ ಮತ್ತು ಶುಭಹಾರೈಕೆ.
Tag: ejnana.com,
ಕಾಮೆಂಟ್‌ಗಳು