ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೇಮಲತಾ ಮಹಿಷಿ

ಹೇಮಲತಾ ಮಹಿಷಿ 

ಹೇಮಲತಾ ಮಹಿಷಿ  ಅವರು ವೃತ್ತಿಯಲ್ಲಿ ವಕೀಲರಾಗಿ, ಪ್ರವೃತ್ತಿಯಲ್ಲಿ ಬರಹಗಾರ್ತಿಯಾಗಿ ಮತ್ತು ಕನ್ನಡಪರ ಧ್ವನಿಯಾಗಿ ಹೆಸರಾದವರು.

ಹೇಮಲತಾ ಅವರು 1944ರ ಅಕ್ಟೋಬರ್ 23ರಂದು ಜನಿಸಿದರು.  ತಂದೆ ಲಕ್ಷ್ಮಣ ರಾವ್ ಶಿರಸಿ. ತಾಯಿ  ಶಾಂತಾಬಾಯಿ. ಎಂ.ಎ ಮತ್ತು ಎಲ್. ಎಲ್.ಬಿ ಪದವಿಗಳನ್ನು ಪಡೆದ ಹೇಮಲತಾ ಅವರು ವಕೀಲರಾಗಿ ಪ್ರಸಿದ್ದರು.  ನಾರಾಯಣ ಮಹಿಷಿ ಅವರ ಪತ್ನಿಯಾಗಿ ಹೇಮಲತಾ ಮಹಿಷಿ ಆಗಿದ್ದಾರೆ.

ಸಾಮಾನ್ಯ ಜನ, ಕನ್ನಡ ನಾಡು ನುಡಿ, ಸಾಹಿತ್ಯದ ವಿಚಾರಗಳಲ್ಲೂ ಆಸಕ್ತರಾದ ಹೇಮಲತಾ ಮಹಿಷಿ ಅವರು ಕನ್ನಡ ಪರ ಮತ್ತು ಸಾಮಾನ್ಯ ಜನರ ಧ್ವನಿಯಾಗಿ, ಬರಹಗಾರ್ತಿಯಾಗಿ, ಸಂಘಟನಾಕಾರರಾಗಿ, ಚಳುವಳಿಗಳಲ್ಲಿ ಭಾಗವಹಿಸಿದವರಾಗಿ ಸಹಾ ಗಮನಾರ್ಹರಾಗಿದ್ದಾರೆ.

ಹೇಮಲತಾ ಮಹಿಷಿ ಅವರು ಕನ್ನಡ ಕಾನೂನು ಪತ್ರಿಕೆಯ ಸಂಪಾದಕರಾಗಿ, ಅಂಕಣಕಾರರಾಗಿ ಮತ್ತು ಕಾನೂನು ಸಲಹೆಗಾರ್ತಿಯಾಗಿ ಅನೇಕ ಪತ್ರಿಕಾ ಬರಹಗಳನ್ನು ಮೂಡಿಸುವುದರ ಜೊತೆಗೆ ಹಲವು ಕೃತಿ ಪ್ರಕಟಣೆ ಮಾಡಿದ್ದಾರೆ. ಕಾನೂನು ಮತ್ತು ಮಹಿಳೆ, ಹಿಂದೂ ವಿವಾಹ ಕಾನೂನು ಮತ್ತು ಮಹಿಳೆ, 21ನೇ ಶತಮಾನದ ಮಹಿಳೆ, ಮಹಿಳೆ ಮತ್ತು ಆಸ್ತಿಹಕ್ಕುಗಳು, ಮಾನವ ಹಕ್ಕುಗಳು, ಸಬಲೆ-ಸಲಹೆ ಇವರ ಪ್ರಮುಖ ಕೃತಿಗಳಾಗಿವೆ.

ಜಾಯಮಾನ, ತ್ರಿಶಂಕು ಹೇಮಲತಾ ಮಹಿಷಿ ಅವರ ಕಥಾ ಸಂಕಲನಗಳು.  ಅನುಕೂಲಕ್ಕೊಬ್ಬ ಹೆಂಡತಿ ಅವರ ಕಿರುನಾಟಕ.

ಹೇಮಲತಾ ಮಹಿಷಿ ಅವರು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಹೈಕೋರ್ಟ್‌ನ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳಾಗಿಯೂ ಸಹಾ ಕಾರ್ಯನಿರ್ವಹಿಸಿದ್ದಾರೆ.

Law expert and writer Hemalatha Mahishi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ