ಕೆ.ಆರ್. ವಿಜಯ
ಕೆ.ಆರ್. ವಿಜಯ
ಕೌಟುಂಬಿಕ ಮತ್ತು ದೈವಿಕ ಪಾತ್ರಗಳಿಗೆ ಹೇಳಿಮಾಡಿಸಿದಂತಹ ನಟಿ ಕೆ. ಆರ್. ವಿಜಯ.
ಕೆ. ಆರ್. ವಿಜಯ ಅವರು 1948 ವರ್ಷದ ನವೆಂಬರ್ 30ರಂದು ತಿರುವನಂತಪುರದಲ್ಲಿ ಜನಿಸಿದರು. 1963 ವರ್ಷದಲ್ಲಿ ಚಿತ್ರರಂಗಕ್ಕೆ ಬಂದ ಕೆ. ಆರ್. ವಿಜಯ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಹಸನ್ಮುಖದ ಸೌಂದರ್ಯ ಹೊರಸೂಸುವ ವಿಜಯ ಅವರ ಮುಖ ಅವರನ್ನು ಚಿತ್ರರಂಗದಲ್ಲಿ ಹೆಚ್ಚು ಸದ್ಗುಣಿಯ ಮತ್ತು ದೈವಿಕ ಕಳೆಯ ಪಾತ್ರಗಳಲ್ಲಿ ಬಿಂಬಿಸುತ್ತ ಬಂದಿದೆ.
ಲೋಕದಲ್ಲಿ ಕೆಡುಕೇ ಹೆಚ್ಚು ಕಾಣುವಾಗ ಒಳ್ಳೆಯ ತನದ ನೆನಪು ಮಾಡಿಕೊಡುವ ಸುದೀರ್ಘ ಕಾಲದ ಸೌಂದರ್ಯಯುತ ಅಭಿವ್ಯಕ್ತಿ ನಿಜಕ್ಕೂ ಮೆಚ್ಚುವಂತ ಸಾಧನೆ. ವಿಜಯ ಅವರು ಕನ್ನಡದ ಅನೇಕ ಚಿತ್ರಗಳಲ್ಲೂ ನಟಿಸಿದ್ದಾರೆ. ಚಿತ್ರರಂಗದಲ್ಲಷ್ಟೇ ಅಲ್ಲದೆ ಕಿರುತೆರೆಯಲ್ಲೂ ಅವರಿಗೆ ಅಪಾರ ಬೇಡಿಕೆ ಇದೆ.
ಈ ಹಿರಿಯ ಕಲಾವಿದರಿಗೆ ಶುಭವಾಗಲಿ.
On the birthday of Great actress K. R. Vijaya
ಕಾಮೆಂಟ್‌ಗಳು