ಶ್ಯಾಮಲಾ ಜಾಗೀರ್ದಾರ್
ಶ್ಯಾಮಲಾ ಜಾಗೀರ್ದಾರ್
ಸುಗಮ ಸಂಗೀತ ಕಲಾವಿದೆ ಶ್ಯಾಮಲಾ ಜಾಗೀರ್ದಾರ್ ಅವರು ಈ ಲೋಕವನ್ನಗಲಿದ ದಿನ ಡಿಸೆಂಬರ್ 21, 2018.
1941ರಲ್ಲಿ ಮೈಸೂರಿನಲ್ಲಿ ಜನಿಸಿದ ಶ್ಯಾಮಲಾ ಜಾಗೀರ್ದಾರ್ ತಮ್ಮ ಏಳನೆಯ ವಯಸ್ಸಿನಲ್ಲೇ ಹಿಂದೂಸ್ಥಾನಿ ಸಂಗೀತ ಕಲಿಕೆ ಆರಂಭಿಸಿದರು. ಮುಂದೆ ಆರು ದಶಕಗಳ ಕಾಲ ಅವರ ಸಂಗೀತ, ಅದರಲ್ಲೂ ವಿಶೇಷವಾಗಿ ಸುಗಮ ಸಂಗೀತ ನಾಡಿನೆಲ್ಲೆಡೆಯಲ್ಲದೆ, ಹೊರನಾಡಿನಲ್ಲೂ ಪಸರಿಸಿತ್ತು.
ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಸುಗಮ ಸಂಗೀತ ಕ್ಷೇತ್ರದ ಅತ್ಯುನ್ನತ ಪುರಸ್ಕಾರವಾದ ‘ಸಂತ ಶಿಶುನಾಳ ಪ್ರಶಸ್ತಿ’, ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುರಸ್ಕಾರಗಳೂ ಸೇರಿದಂತೆ ಅನೇಕ ಗೌರವಗಳು ಶ್ಯಾಮಲಾ ಜಾಗೀರ್ದಾರ್ ಅವರನ್ನು ಅರಸಿ ಬಂದಿದ್ದವು.
On Remembrance Day of singer Shyamala Jagirdar
ಕಾಮೆಂಟ್ಗಳು