ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಹಾದೇವನ್


 ಕೆ. ವಿ. ಮಹಾದೇವನ್


ಕೆ. ವಿ. ಮಹಾದೇವನ್ ‍ದಕ್ಷಿಣ ಭಾರತದ ಶ್ರೇಷ್ಠ ಸಂಗೀತ ಸಂಯೋಜಕಲ್ಲೊಬ್ಬರು. ಕನ್ನಡದ ಗುರುಶಿಷ್ಯರು, ಕೃಷ್ಣರುಕ್ಮಿಣಿ, ತೆಲುಗಿನ ಶಂಕರಾಭರಣಂ, ತಮಿಳಿನ ತಿರುವಿಳೈಯಾಡಲ್ ಸೇರಿದಂತೆ ಕೆ. ವಿ. ಮಹಾದೇವನ್ ಅನೇಕ ಸಂಗೀತ ಸಂಯೋಜನೆಗಳಿಂದ ಪ್ರಸಿದ್ಧರಾಗಿದ್ದಾರೆ.

ಕೃಷ್ಣಕೋಯಿಲ್ ವೆಂಕಟಾಚಲಮ್ ಮಹಾದೇವನ್ 1918ರ ಮಾರ್ಚ್ 14ರಂದು ನಾಗರಕೋಯಿಲ್ ಸಮೀಪದ ಕೃಷ್ಕೋಯಿಲ್ ಎಂಬಲ್ಲಿ ಜನಿಸಿದರು.  ತಂದೆ ವೆಂಕಟಾಚಲಮ್ ಭಾಗವತರ್, ತಾಯಿ ಪಿಚೈಯಮ್ಮಾಳ್.

1942ರಿಂದ 1993ವರೆಗಿನ 5 ದಶಕಗಳ ವಿಸ್ತ್ರೃತ ಅವಧಿಯಲ್ಲಿ ಸುಮಾರು 600 
ಚಿತ್ರಗಳಲ್ಲಿ ಕೆ. ವಿ. ಮಹಾದೇವನ್ ಅವರ ಸಂಗೀತ ಹರಡಿತ್ತು.  ಮಂಚಿ ಮನಸುಲು, ಲವಕುಶ, ತಿರುವಿಳೈಯಾಡಲ್, ಸರಸ್ವತಿ ಶಪಥಂ, ಕಂದನ್ ಕರುಣೈ, ತಿಲ್ಲಾನ ಮೋಹನಾಂಬಾಳ್, ಬಾಲರಾಜು ಕಥಾ, ಆದಿಪರಾಶಕ್ತಿ, ಶಂಕರಾಭರಣಂ, ಸಪ್ತಪದಿ, 
ಸಿರಿವೆನ್ನಲ, ಶೃತಿಲಯಲು, ಪೆಳ್ಳಿ ಪುಸ್ತಕಮ್, ಸ್ವಾತಿಕಿರಣಮ್, ಗುರುಶಿಷ್ಯರು, ಮಾನಿನಿ, ಕೃಷ್ಣರುಕ್ಮಿಣಿ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳಿಗೆ ಮಹಾದೇವನ್ ಅವರ ಸಂಗೀತ ಸಂಯೋಜನೆ ಇತ್ತು.

ಎರಡು ರಾಷ್ಟ್ರಪ್ರಶಸ್ತಿಗಳು, ತಮಿಳು ನಾಡು ಮತ್ತು ಆಂಧ್ರ ಪ್ರದೇಶ ಸರ್ಕಾರದ ರಾಜ್ಯ ಚಲನ ಚಿತ್ರಪ್ರಶಸ್ತಿಗಳು ಕೆ. ವಿ. ಮಹಾದೇವನ್ ಅವರಿಗ ಸಂದಿದ್ದವು.

ಕೆ. ವಿ. ಮಹಾದೇವನ್ ಅವರು 2001ರ ಜೂನ್ 21ರಂದು ಈ ಲೋಕವನ್ನಗಲಿದರು.

On the birth anniversary of great music director K. V. Mahadevan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ