ವಿಶ್ವ ಪುಸ್ತಕ ದಿನ
Whenever I am lost, I find me in a book.
ಇಂದು ವಿಶ್ವ ಪುಸ್ತಕ ದಿನ. ಪುಸ್ತಕಗಳು ನನ್ನನ್ನು ಉಳಿಸಿ ಬೆಳೆಸಿವೆ. ಪುಸ್ತಕಗಳಿಲ್ಲದ ಪಕ್ಷದಲ್ಲಿ ನನ್ನಲ್ಲಿ ಮತ್ತು ಈ ಲೋಕದಲ್ಲಿ ತುಂಬಿರುವ ಮೂರ್ಖತನದಲ್ಲಿ ನಾ ಏನಾಗುತ್ತಿದ್ದೆ ಎಂದು ಊಹಿಸುವುದು ತುಂಬಾ ಕಷ್ಟ. ನಾ ಕಳೆದುಹೋದೆ ಎಂಬ ಭಾವ ಉದಿಸಿದಾಗಲೆಲ್ಲ, ನಾನು ಯಾವುದಾದರೂ ಪುಸ್ತಕಕ್ಕೆ ಶರಣಾಗಿ ನನ್ನ ನಾ ಹುಡುಕಿಕೊಳ್ಳುತ್ತೇನೆ.
ವಿಶ್ವದಲ್ಲಿರುವ ಪುಸ್ತಕಗಳನ್ನಿರಲಿ, ನನ್ನಲಿರುವ ಪುಸ್ತಕಗಳನ್ನೇ ನಾನಿನ್ನೂ ಪೂರ್ತಿಯಾಗಿ ಓದಲಾಗಿಲ್ಲ. ಎಂದಾದರೂ ಓದುತ್ತೇನೆ ಎಂಬ ಆಶಯದಲ್ಲಿ ಪುಸ್ತಕವನ್ನಂತೂ ಸೇರಿಸುತ್ತಲೇ ಇರುತ್ತೇನೆ. ಊರಿಂದೂರಿಗೆ ವಲಸೆ ಹೋದಾಗ ಬಹಳಷ್ಟು ಕೈಬಿಟ್ಟು ಹೋಗಿ, ಪುನಃ ಪುನಃ ಕೊಂಡಿದ್ದೇನೆ. ಪುಸ್ತಕಗಳಿಗೆ ನಾನೆಂದೂ ಋಣಿ. ಆಗಾಗ ಪುಸ್ತಕದಂಗಡಿಗೆ ಹೋಗಿ ಏನಾದರೂ ಹೊಸ ಶೀರ್ಷಿಕೆ ಆಪ್ತವಾಗುತ್ತದಾ ಎಂದು ಕಣ್ಣಾಡಿಸಿ, ಏನಾದರೂ ಒಂದನ್ನಾದರೂ ಕೊಂಡು ತರುವಷ್ಟು ಪ್ರಿಯವಾದ ಕೆಲಸ ಮತ್ತೊಂದಿಲ್ಲ.
Today is the World Books Day. Books protected me and enabled me to grow. Without the help of books, I can't imagine how I would have been able to come out of idiocies of my own and of the world around. Leave about the books of the world at large, I am not being able to read even whatever I have. On many occasions of moving across places many a books have moved out of my hands, but still I keep adding them while at home in India or my current working place in Dubai. I am ever indebted to the world of books. I can't imagine myself in a world without books. There is nothing much more beautiful experience than frequently going to a big book shop, look for some impressive titles and bring at least one among them home.
ಕಾಮೆಂಟ್‌ಗಳು