ಎನ್. ವೀರಸ್ವಾಮಿ
ಎನ್. ವೀರಸ್ವಾಮಿ
ಎನ್. ವೀರಸ್ವಾಮಿ ತಾವು ಕಟ್ಟಿದ ಈಶ್ವರೀ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಕನ್ನಡ ಚಿತ್ರರಂಗಕ್ಕೆ ವೈಭವ ತಂದುಕೊಟ್ಟವರು.
ವೀರಸ್ವಾಮಿ 1932ರ ಏಪ್ರಿಲ್ 17ರಂದು ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ಓಟ್ಟೇರಿ ಎಂಬಲ್ಲಿ ರೈತ ಕುಟುಂಬದಲ್ಲಿ ಜನಿಸಿದರು. ತಂದೆ ನಾಗಪ್ಪ ಮೊದಲಿಯಾರ್. ತಾಯಿ ಕಾಮಾಕ್ಷಮ್ಮ.
ಬಡತನದ ಕುಟುಂದಿಂದ ಬದುಕನ್ನರಸಿ ಹೊರಟ ವೀರಸ್ವಾಮಿ 1950ರ ದಶಕದ ಆರಂಭದಲ್ಲಿ ಡ್ರೀಮ್ಲ್ಯಾಂಡ್ ಪಿಕ್ಚರ್ಸ್ ಕಾರ್ಪೊರೇಷನ್ ಸಂಸ್ಥೆ ಕಛೇರಿಯಲ್ಲಿ ನೌಕರನಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಹೊಟ್ಟೆಹೊರೆಯತ್ತಿದ್ದರು. ಮುಂದೆ ವೀರಾಸ್ವಾಮಿ ಗೆಳೆಯರೊಡನೆ ಸೇರಿ ಸಿನೆಮಾಗಳನ್ನು ವಿತರಿಸುವ ಹೊಸ ಬದುಕನ್ನು ಆರಂಭಿಸಿದರು.
ವೀರಸ್ವಾಮಿ ಅವರು 1955ರಲ್ಲಿ ಗೆಳೆಯ ಗಂಗಪ್ಪ ಅವರೊಡಗೂಡಿ ಉದಯ ಪಿಕ್ಚರ್ಸ್ ಲಾಂಛನದ ಅಡಿಯಲ್ಲಿ ಚಿತ್ರ ವಿತರಣೆ ಆರಂಭಿಸಿದರು. ಮುಂದೆ ಈ ಈರ್ವರು ಈಶ್ವರಿ ಸಂಸ್ಥೆಯ ಮೂಲಕ ಚಿತ್ರನಿರ್ಮಾಣ ಮತ್ತು ಹಂಚಿಕೆ ಆರಂಭಿಸಿ ಕನ್ನಡದಲ್ಲಿ ಭವ್ಯ ಚಿತ್ರಗಳನ್ನು ನಿರ್ಮಿಸಿದರು.
1971ರಲ್ಲಿ ಈಶ್ವರೀ ಸಂಸ್ಥೆಯ ಮೊದಲ ಚಿತ್ರ 'ಕುಲಗೌರವ' ತೆರೆಕಂಡಿತು. ಮುಂದೆ 1972ರಲ್ಲಿ 'ನಾಗರಹಾವು', 1974ರಲ್ಲಿ 'ಭೂತಯ್ಯನ ಮಗ ಅಯ್ಯು' ಕನ್ನ ಚಿತ್ರರಂಗದ ಮೈಲುಗಲ್ಲುಗಳೆನಿಸಿದವು. ಹೇಮಾವತಿ ಮತ್ತೊಂದು ಹೆಸರಾದ ಚಿತ್ರ. ನಾ ನಿನ್ನ ಮರೆಯಲಾರೆ, ಚಕ್ರವ್ಯೂಹ ಅಪಾರ ಯಶಸ್ಸು ಕಂಡವು. ನಾರದ ವಿಜಯ, ಭೂಲೋಕದಲ್ಲಿ ಯಮರಾಜ, ನಾರಿ ಸ್ವರ್ಗಕ್ಕೆ ದಾರಿ ಮುಂತಾದ ಚಿತ್ರಗಳಲ್ಲದೆ ತಮ್ಮ ಪುತ್ರ ಕನಸುಗಾರ ಎನಿಸಿರುವ ರವಿಚಂದ್ರನ್ ಅಭಿನಯದ ನಾನು ನನ್ನ ಹೆಂಡತಿ, ಪ್ರಳಯಾಂತಕ, ರಾಮಾಚಾರಿ, ಹಳ್ಳಿ ಮೇಷ್ಟ್ರು , ಸಾವಿರ ಸುಳ್ಳು, ಗೋಪೀಕೃಷ್ಣ ಮುಂತಾದ ಚತ್ರಗಳನ್ನು ನಿರ್ಮಿಸಿದರು. ರವಿಚಂದ್ರನ್ 'ಪ್ರೇಮಲೋಕ'ದಿಂದ ದೊಡ್ಡ ಹೆಸರಾಗಿ ಕಲಾವಿದನಾಗಿರುವುದಲ್ಲದೆ, ಈಶ್ವರೀ ಸಂಸ್ಥೆಯಿಂದ ನಿರಂತರವಾಗಿ ಚಿತ್ರರಂಗವನ್ನು ಮುನ್ನಡೆಸಿದ್ದಾರೆ. ವೀರಸ್ವಾಮಿ ಅವರು ತಮಿಳಿನಲ್ಲಿ 'ಪಡಿಕ್ಕಾದವನ್', ಹಿಂದಿಯಲ್ಲಿ 'ಇಂಕ್ವಿಲಾಬ್' ಎಂಬ ಚಿತ್ರಗಳನ್ನೂ ನಿರ್ಮಿಸಿದರು. ಅನೇಕ ಚಿತ್ರಗಳನ್ನು ಉತ್ತಮವಾಗಿ ವಿತರಿಸಿ ಕನ್ನಡ ಚಲನಚಿತ್ರರಂಗಕ್ಕೆ ವ್ಯಾವಹಾರಿಕ ನೆಲೆ ಹಾಕಿಕೊಟ್ಟವರು. ಅವರ ಚಿತ್ರಗಳಿಂದ ಬಂದ ಕಲಾವಿದರು ಮತ್ತು ತಂತ್ರಜ್ಞರು ಪ್ರಸಿದ್ಧರಾದರು.
ಎನ್. ವೀರಸ್ವಾಮಿ ಅವರು 1992ರ ಆಗಸ್ಟ್ 23ರಂದು ಈ ಲೋಕವನ್ನಗಲಿದರು. ಕನ್ನಡ ಚಿತ್ರರಂಗಕ್ಕೆ ಹೊಸಯುಗದ ಸೃಷ್ಟಿಕರ್ತರಾಗಿ ಅವರ ಹೆಸರು ಸದಾ ಅಮರ.
On the birth anniversary of great film producer and distributor N. Veeraswamy
ಕಾಮೆಂಟ್‌ಗಳು