ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಾಲಾ ಬಾಗ್


 ಜಲಿಯನ್ ವಾಲಾ ಬಾಗ್ ಸ್ಮರಣೆ


ಏಪ್ರಿಲ್ 13, ಅಮೃತಸರದ ಜಲಿಯನ್ ವಾಲಾ ಬಾಗಿನಲ್ಲಿ ನಮಗಾಗಿ ಅಸಂಖ್ಯಾತ ಸ್ತ್ರೀ ಪುರುಷ ಮಕ್ಕಳು ಜೀವತೆತ್ತ ದಿನ.  ಅವರಿಗಾಗಿ ಮನಮಿಡಿಯುವ ಕ್ಷಣವಿದು. 

ಏಪ್ರಿಲ್ 13, 1919ರಲ್ಲಿ ಈ ಚಿತ್ರದಲ್ಲಿ ತೋರಿರುವ ಕಿರು ಏಕ  ಪ್ರವೇಶದಲ್ಲಿ ಒಳಗೆ ಬಂದು ಸಭೆ ಸೇರಿದ್ದವರು  10,000ಕ್ಕೂ ಹೆಚ್ಚು ಮಂದಿ ಪುರುಷರು, ಮಹಿಳೆಯರು ಮತ್ತು ಮಕ್ಕಳು.   ಅವರಿಗೆ ಹೊರಹೋಗಲಿಕ್ಕೆ ಸಹಾ  ಯಾವುದೇ ಆಸ್ಪದವಿಲ್ಲದ ಹಾಗೆ, ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಇ. ಡೈಯರ್ ಎಂಬ ಅಯೋಗ್ಯ ಅಧಿಕಾರಿಯ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು 15 ನಿಮಿಷಗಳ ಕಾಲ ಗುಂಡಿನ ಮಳೆಗರೆದವು.  ಈ ಗುಂಡಿನ ಸುರಿಮಳೆಯಲ್ಲಿ ಕನಿಷ್ಠ 379 ಜನ ಮೃತರಾಗಿ 1200ಕ್ಕೂ ಹೆಚ್ಚು ಮಂದಿ ಗಾಯಗೊಂಡರು.  ಅನೇಕರು ಈ ಬಾವಿಗೆ ಹಾರಿದ ಘಟನೆ ಕೂಡಾ ನಡೆಯಿತು.  ಈ ಹತ್ಯಾಕಾಂಡ ಭಾರತೀಯರ ಸ್ವಾತಂತ್ರ್ಯ ಹೋರಾಟದ ಕೆಚ್ಚನ್ನು ಇನ್ನಷ್ಟು ಹೆಚ್ಚಿಸಿತು. 

ಇಂದು ನಮಗಾಗಿ ಜೀವತೇಯ್ದ ಹುತಾತ್ಮರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವುದರ ಜೊತೆಗೆ, ನಮಗಾಗಿ ತಮ್ಮ ಜೀವವನ್ನೂ ಬಲಿಕೊಟ್ಟು ಅಂದಿನ ಸಮಾಜ ನಮಗೆ ಕೊಡುಗೆಯಾಗಿ  ಕೊಟ್ಟ ಈ ಸ್ವಾತಂತ್ರ್ಯಕ್ಕೆ ನಿಷ್ಠಾವಂತವಾಗಿರಬೇಕಾಗಿದೆ.

On the day of Jallianwala Bagh massacre..

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ