ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಮ್ಮ ಚಿನ್ನಾರಿ ಮುತ್ತ


 ನಮ್ಮ ಚಿನ್ನಾರಿ ಮುತ್ತ 


ಇಂದು ನಟ ವಿಜಯ್ ರಾಘವೇಂದ್ರ ಹುಟ್ಟುಹಬ್ಬ.  ವಿಜಯ್ ರಾಘವೇಂದ್ರ ಅಂದರೆ ಮೊದಲು ನೆನಪಾಗೋದು ಅವರು ಬಾಲನಟನಾಗಿ ಪ್ರಸಿದ್ಧಿ ಪಡೆದ ಬಾಲನಟನ ಪಾತ್ರಗಳು.

ಚಿನ್ನಾರಿ ಮುತ್ತ ಚಿತ್ರದಲ್ಲಿ ಅವರು ಅಭಿನಯಿಸಿದ ಮುತ್ತನ ಪಾತ್ರ ಮನದಿಂದ ಎಂದೂ ಅಳಿಯಲಾರದ್ದು.  ಕೊಟ್ರೇಶಿ ಕನಸು ಚಿತ್ರದಲ್ಲಿ ಮತ್ತೊಂದು ಅದ್ಭುತ ಪಾತ್ರ.  ಆ ನಿರ್ವಹಣೆ ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಶ್ರೇಷ್ಠ ಬಾಲನಟ ಪ್ರಶಸ್ತಿ ತಂತು. ಗಾನಯೋಗಿ ಪಂಚಾಕ್ಷರಿ ಚಿತ್ರದಲ್ಲಿನ ಬಾಲ ಪಂಚಾಕ್ಷರಿ ಗವಾಯಿ ಪಾತ್ರ ಕೂಡಾ ಸ್ಮರಣೀಯ.

ರಾಜ್‍ಕುಮಾರ್ ಅವರ  ಬಂಧುವಾದ ಪ್ರಸಿದ್ಧ ನಿರ್ಮಾಪಕ ಎಸ್ ಎ ಚಿನ್ನೇಗೌಡರ ಪುತ್ರರಾದ ವಿಜಯ್ ರಾಘವೇಂದ್ರ ಪುಟ್ಟವಯಸ್ಸಿನಿಂದಲೇ ಹಲವಾರು ಬಾಲಪಾತ್ರಗಳನ್ನು ನಿರ್ವಹಿಸುತ್ತಾ ಬೆಳೆದರು.

ರಾಧಿಕಾ ಜೊತೆ ವಿಜಯ್ ರಾಘವೇಂದ್ರ ಜೋಡಿಯಾಗಿ ನಟಿಸಿದ 'ನಿನಗಾಗಿ'  ಬಹು ಯಶಸ್ವಿಯಾಗಿತ್ತು.  ಕಲ್ಲರಳಿ ಹೂವಾಗಿ, ಸೇವಂತಿ ಸೇವಂತಿ ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ತಂದುಕೊಟ್ಟ ಶಿವಯೋಗಿ ಶ್ರೀ ಪುಟ್ಟಯ್ಯಜ್ಜ ಮುಂತಾದವು ಇವರ ಇನ್ನಿತರ ಕೆಲವು ಪ್ರಸಿದ್ಧ ಚಲನಚಿತ್ರಗಳು.

ವಿಜಯ್ ರಾಘವೇಂದ್ರ ಬಿಗ್ ಬಾಸ್ ಸರಣಿಯ ಮೊದಲ ವಿಜೇತರು ಕೂಡ.  ಅವರು ಹೇಗಿದ್ದು ಹೇಗಾದರೂ ನಮ್ಮ 'ಚಿನ್ನಾರಿ ಮುತ್ತ'. ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birth day of actor Vijay Raghavendra 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ