ಚನ್ನಗಿರಿ ಸುಧೀಂದ್ರ
ಡಾ. ಚನ್ನಗಿರಿ ಸುಧೀಂದ್ರ
ಡಾ. ಚನ್ನಗಿರಿ ಸುಧೀಂದ್ರ ಆಕಾಶವಾಣಿಯಲ್ಲಿ ಅಧಿಕಾರಿಗಳಾಗಿ ಮತ್ತು ಪತ್ರಿಕಾ ಬರಹಗಳಲ್ಲಿ ಆಪ್ತ ಹೆಸರು. ಫೇಸ್ಬುಕ್ನಲ್ಲಿ ಸುಧೀಂದ್ರ ನಾರಾಯಣಜೋಯಿಸರ ರೂಪದಲ್ಲಿರುವ ಇವರ ಜನ್ಮದಿನ ಜೂನ್ 2.
ಚನ್ನಗಿರಿ ಸುಧೀಂದ್ರರು ಆಕಾಶವಾಣಿ ಸುಧೀಂದ್ರ ಎಂದೇ ಮಲೆನಾಡಿನಲ್ಲಿ ಖ್ಯಾತರು. ಅವರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದವರು.
ಚನ್ನಗಿರಿ ಸುಧೀಂದ್ರರು 'ಆಕಾಶವಾಣಿ ಕನ್ನಡ ನಾಟಕಗಳು' ಬಗ್ಗೆ ಪಿಎಚ್.ಡಿ. ಪಡೆದಿದ್ದಾರೆ. ಇವರಿಗೆ ಪರಿಸರ ಜಾಗೃತಿ ಗೀತೆ (ಕನ್ನಡ ವಿಭಾಗ) ರಚನಾಸ್ಪರ್ಧೆಯಲ್ಲಿ ಕೇಂದ್ರ ಸರ್ಕಾರದ ಪರಿಸರ ಇಲಾಖೆಯು ಬಹುಮಾನ ನೀಡಿತ್ತು. ಆಕಾಶವಾಣಿ ರಾಷ್ಟ್ರೀಯ ಮಟ್ಟದ ವಾರ್ಷಿಕ ಪುರಸ್ಕಾರ ಸ್ಪರ್ಧೆಯಲ್ಲಿ ಲಾಸಾ ಕೌಲ್ ಪ್ರಶಸ್ತಿ ಗಳಿಸಿದ ಹಿರಿಮೆ ಇವರದ್ದು. ಮೂರು ಬಾರಿ ರಾಜ್ಯಮಟ್ಟದ ಆಕಾಶವಾಣಿ ಕಾರ್ಯಕ್ರಮ ಸ್ಪರ್ಧೆಯಲ್ಲಿ ವಿವಿಧ ಪುರಸ್ಕಾರಗಳೂ ಇವರಿಗೆ ಸಂದಿದ್ದವು.
ಚನ್ನಗಿರಿ ಸುಧೀಂದ್ರ ಅವರ ಬರಹಗಳು ಕತೆ, ಕವಿತೆ, ಪ್ರವಾಸ ಲೇಖನ, ಹಾಸ್ಯ ಬರಹ, ಆಧ್ಯಾತ್ಮ, ವ್ಯಕ್ತಿ ಚಿತ್ರಣ, ವಿಚಾರ ಲಹರಿ ಹೀಗೆ ಎಲ್ಲ ರೂಪಗಳಲ್ಲಿ ವಿವಿಧ ಪತ್ರಿಕೆಗಳು, ನಿಯತಕಾಲಿಕಗಳು, ಅಂತರಜಾಲ ಪತ್ರಿಕೆಗಳು ಮತ್ತು ಸಮೂಹ ಮಾಧ್ಯಮಗಳಲ್ಲಿ ನಿರಂತರ ಮೂಡಿ ಬರುತ್ತಿವೆ. ವ್ಯಂಗಚಿತ್ರ, ಡಿಜಿಟಲ್ ಆರ್ಟ್, ಛಾಯಾಗ್ರಹಣ ಮುಂತಾದ ವಿವಿಧ ಆಸಕ್ತಿಗಳೂ ಅವರಲ್ಲಿ ಅಪಾರವಾಗಿವೆ. ಸಾಹಿತ್ಯಾಸಕ್ತಿಯಲ್ಲಂತೂ ಸುಧೀಂದ್ರರ ಆಸಕ್ತಿಗಳು ಅನುಪಮವಾದದ್ದು. ಅವರು ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಘಟಕದ ಅಧ್ಯಕ್ಷರೂ ಆಗಿದ್ದಾರೆ.
ಆತ್ಮೀಯರಾದ ಸುಧೀಂದ್ರ ನಾರಾಯಣಜೋಯಿಸ್ ಅವರಿಗೆ ಜನ್ಮದಿನದ ಶುಭಹಾರೈಕೆಗಳು.
Happy birthday Sudheendra Narayanajois Sir
ಕಾಮೆಂಟ್‌ಗಳು