ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೀನಾ


 ಮೀನಾ


ಮೀನಾ ದಕ್ಷಿಣ ಭಾರತದ ಸುಂದರ ಮತ್ತು ಪ್ರತಿಭಾನ್ವಿತ ಅಭಿನೇತ್ರಿ. 

ಮೀನಾ 1974ರ ಸೆಪ್ಟೆಂಬರ್ 16ರಂದು ಚೆನ್ನೆನಲ್ಲಿ ಜನಿಸಿದರು. ತಾಯಿ ಕೇರಳದವರು. ತಂದೆ ದೊರೈರಾಜ್ ಆಂಧ್ರದವರು. 2009ರಲ್ಲಿ ಇವರು ಪತಿ ದಿವಂಗತ ವಿದ್ಯಾಸಾಗರ್ ಬೆಂಗಳೂರಿನವರು.  ಹೀಗಾಗಿ ಮೀನಾ ಎಲ್ಲೆಡೆಗೆ ಸೇರಿದವರು,  ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲಿ ನಟಿಸಿರುವುದಲ್ಲದೆ ಈ ಎಲ್ಲ ಭಾಷೆಗಳಲ್ಲೂ ಸಂಭಾಷಿಸುತ್ತಾರೆ.  ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದು ನಿರಂತರ ಮೇಲೇರಿದ ಇವರು ಕೆಲ ಚಿತ್ರಗಳಲ್ಲಿ ಹಾಡಿದ್ದಾರೆ, ಇತರ ಕಲಾವಿದರಿಗೆ ಡಬ್ಬಿಂಗ್ ಕಲಾವಿದೆಯಾಗಿ ಕೂಡಾ ಧ್ವನಿ ನೀಡಿದ್ದಿದೆ. ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದು ಕಾಲೇಜಿಗೆ ಹೋಗದಿದ್ದರೂ ಮನೆಯಲ್ಲೇ ಓದಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. 

ಮೀನಾ 1982ರಲ್ಲಿ ಶಿವಾಜಿ ಗಣೇಶನ್ ಅವರೊಡನೆ 'ನೆಂಜಂಗಳ್' ಎಂಬ ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರಜೀವನ ಪ್ರಾರಂಭಿಸಿ ಸುಮಾರು 45 ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದರು. ತೆಲುಗಿನ ಪ್ರಸಿದ್ಧ ಚಿತ್ರ 'ಸೀತಾರಾಮಯ್ಯಗಾರಿ ಮನವರಾಳ್ಲು' ಅವರ ಪ್ರಥಮ ಪ್ರಧಾನ ಯಶಸ್ಸು.  ಮುಂದೆ ಅವರು ದಕ್ಷಿಣ ಭಾರತದ ಬಗಳಷ್ಟು ಪ್ರಸಿದ್ಧ ನಾಯಕರುಗಳ ಜೊತೆಯಲ್ಲಿ, ಇತ್ತೀಚಿನ ದೃಶ್ಯಂ (1 ಮತ್ತು 2) ವರೆಗೆ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದಾರೆ.  ಕನ್ನಡದಲ್ಲಿ ರವಿಚಂದ್ರನ್ ಅವರೊಡನೆ 'ಪುಟ್ನಂಜ', ವಿಷ್ಣುವರ್ಧನ್ ಅವರೊಡನೆ 'ಸಿಂಹಾದ್ರಿಯ ಸಿಂಹ', ಸುಧೀಪ್ ಅವರೊಡನೆ 'ಮೈ ಆಟೋಗ್ರಾಫ್', 'ಸ್ವಾತಿ ಮುತ್ತು'; ರಮೇಶ್ ಅರವಿಂದ್ ಜೊತೆ 'ಹೆಂಡ್ತೀರ ದರ್ಬಾರ್' ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.  'ಸಾಂತ್ವನಂ', 'ನಾಟ್ಟಮೈ', 'ಅವೈ ಷಣ್ಮುಗಿ', 'ಪಾರ್ಥಿಬನ್', 'ಪೋರ್ಕಾಲಂ', 'ಭಾರತಿ ಕಣ್ಣಮ್ಮ', 'ರಿಥಂ', 'ಯೆಜಮಾನ್', 'ವೀರಾ', 'ಮುತ್ತು' ಮುಂತಾದವು ಅವರ ದಕ್ಷಿಣ ಭಾರತದ ಇನ್ನಿತರ ಬಹು ಯಶಸ್ವೀ ಚಿತ್ರಗಳಲ್ಲಿ ಸೇರಿವೆ. 

ಮೀನಾ ಅವರಿಗೆ ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿ ಮತ್ತು ವಿವಿಧ ಭಾಷೆಗಳಲ್ಲಿನ ಚಿತ್ರಗಳ ಅಭಿನಯಕ್ಕಾಗಿನ ಹಲವಾರು ಪ್ರಶಸ್ತಿಗಳು ಸಂದಿವೆ.


On the birthday of actress Meena

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ