ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಜಯ್ ರೆಡ್ಡಿ

 

ವಿಜಯ್ ರೆಡ್ಡಿ

ವಿಜಯ್ ರೆಡ್ಡಿ ಕನ್ನಡ ಚಿತ್ರರಂಗದ ಮಹತ್ವದ ನಿರ್ದೇಶಕರಲ್ಲೊಬ್ಬರು. ಇಂದು ಅವರ ಸಂಸ್ಮರಣಾ ದಿನ.

ವಿಜಯ್ ರೆಡ್ಡಿ ಆಂಧ್ರದ ಮೂಲದವರು.  ಕನ್ನಡದಲ್ಲಿ ಅವರು ವಿಜಯ್ ಎಂದೇ ಪ್ರಖ್ಯಾರಾಗಿ 48 ಚಿತ್ರಗಳನ್ನು ನಿರ್ದೇಶಿಸಿ ಹಲವು ಚಿತ್ರಗಳ ನಿರ್ಮಾಣದಲ್ಲಿ ಪಾಲುದಾರರೂ ಆಗಿದ್ದರು.

ವಿಜಯ್ ಅವರು 1970ರಲ್ಲಿ 'ರಂಗಮಹಲ್ ರಹಸ್ಯ' ಎಂಬ ಚಿತ್ರ ನಿರ್ದೇಶಿಸಿದರು.  ನಂತರ ಕೌಬಾಯ್ ಕುಳ್ಳ, ಗಂಧದ ಗುಡಿ, ಮಯೂರ, ಶ್ರೀನಿವಾಸ ಕಲ್ಯಾಣ, ಬಡವರ ಬಂಧು, ಸನಾದಿ ಅಪ್ಪಣ್ಣ, ನೀ ನನ್ನ ಗೆಲ್ಲಲಾರೆ, ಭಕ್ತ ಪ್ರಹ್ಲಾದ, ಹುಲಿಯ ಹಾಲಿನ ಮೇವು, ಆಟೋ ರಾಜ, ಮುಳ್ಳಿನ ಗುಲಾಬಿ, ಖದೀಮ ಕಳ್ಳರು, ಕುಂತಿ ಪುತ್ರ, ಮೋಜುಗಾರ ಸೊಗಸುಗಾರ, ಕರ್ನಾಟಕ ಸುಪುತ್ರ, ಹೃದಯಾಂಜಲಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದರು. ಅವರು ನಿರ್ದೇಶಿಸಿದ ಬಹುತೇಕ ಚಿತ್ರಗಳು ಯಶಸ್ಸು ಕಂಡಿದ್ದವು.

ವಿಜಯ ರೆಡ್ಡಿ ಅವರು ಕನ್ನಡವಷ್ಟೇ ಅಲ್ಲದೆ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳ ಭಾಷೆಗಳಲ್ಲೂ ಹಲವಾರು ಚಿತ್ರಗಳನ್ನು  ನಿರ್ದೇಶಿಸಿದ್ದಾರೆ. ಒಟ್ಟಾರೆ ಅವರು  75 ಚಿತ್ರಗಳನ್ನು ನಿರ್ದೇಶಿಸಿದ್ದರು. ರಾಜ್‌ಕುಮಾರ್‌, ವಿಷ್ಣುವರ್ಧನ್, ಅಂಬರೀಷ್‌, ಅನಂತನಾಗ್‌, ಶಂಕರ್ ನಾಗ್, ಶ್ರೀನಾಥ್, ದ್ವಾರಕೀಶ್, ಶಿವರಾಜಕುಮಾರ್ ಮುಂತಾದ ಎಲ್ಲ ಪ್ರಮುಖ ನಾಯಕ ನಟರ ಚಿತ್ರಗಳನ್ನು ವಿಜಯ್ ನಿರ್ದೇಶಿಸಿದ್ದರು.  ಹಿರಿಯ ವಯಸ್ಸಿನಲ್ಲಿ ಅವರು ಕೆಲವೊಂದು ಧಾರಾವಾಹಿಗಳನ್ನೂ ನಿರ್ದೇಶಿಸಿದ್ದರು.

ಅಷ್ಟೊಂದು ಯಶಸ್ವೀ ಚಿತ್ರಗಳನ್ನು ಸೊಗಸಾಗಿ ನಿರ್ದೇಶಿಸಿದವರಾದರೂ ವಿಜಯ್ ಬಹುತೇಕವಾಗಿ ಪ್ರಚಾರಗಳಿಂದ ದೂರ ಇದ್ದದ್ದು ಕಾಣಬರುತ್ತದೆ.

ವಿಜಯ್ ರೆಡ್ಡಿ 2020ರ ಅಕ್ಟೋಬರ್ 9ರಂದು ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು. 

On  Remembrance Day of Vijay Reddy,  who directed over 75 movies

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ