ಗೋಪಾಲಕೃಷ್ಣ
ಗೋಪಾಲಕೃಷ್ಣ
ಇಂದು ನಮ್ಮ ಗೋಪಾಲಕೃಷ್ಣ ಸಾರ್ ಹುಟ್ಟಿದ ಹಬ್ಬ.
ನಮ್ಮ ಗೋಪಾಲಕೃಷ್ಣ ಸಾರ್ 'ಪ್ರಭ' ಎಂಬ ಹೆಸರಿನಲ್ಲಿ ಪತ್ರಿಕೆಗಳಲ್ಲಿ ಅನೇಕ ವರ್ಷ ಲೇಖನ ಬರೆದು ಜನರನ್ನು ನಗಿಸಿದವರು ಜೊತೆಗೆ ಚಿಂತನೆಗೆ ಹಚ್ಚಿದವರು. 'ಕೊರವಂಜಿ' - 'ಅಪರಂಜಿ' ಬಳಗದ ಕ್ರಿಯಾಶೀಲ ಲೇಖಕರೂ ಮತ್ತು ಆ ಬಳಗದ ಹಾಸ್ಯೋತ್ಸವ ಸಂಯೋಜನೆಗಳಲ್ಲೂ ಕಾರ್ಯನಿರ್ವಹಿಸಿದವರು. ಅವರು ಸುಮಾರು 30 ಕೃತಿಗಳನ್ನು ಪ್ರಕಟಿಸಿದ್ದಾರೆ. ಇವೆಲ್ಲದರ ಜೊತೆಗೆ ಅವರದ್ದು ತಮ್ಮನ್ನೆಂದೂ ತೋರ್ಪಡಿಸಿಕೊಳ್ಳದೆ ಇತರರನ್ನು ಪ್ರೋತ್ಸಾಹಿಸುವ ಗುಣ.
ಎಂ.ಎ., ಎಲ್ ಎಲ್ ಬಿ ಪದವಿಗಳನ್ನು ಗಳಿಸಿ ಬಿ.ಇ.ಎಲ್ ಸಂಸ್ಥೆಯಲ್ಲಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಗೋಪಾಲಕೃಷ್ಣರು ಸಾರ್ವಜನಿಕ ಹಿತ ಮತ್ತು ಸಾಂಸ್ಕೃತಿಕ ಸಂಘಟನಾ ಕಾರ್ಯಗಳಲ್ಲೂ ಸದಾ ಮುಂದು.
ಹಿರಿಯರೂ, ಆತ್ಮೀಯರೂ, ನನ್ನ ಕಾರ್ಯಗಳಿಗೆ ಸದಾ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರುವವರೂ ಅದ ಗೋಪಾಲಕೃಷ್ಣರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಅವರು ಮತ್ತು ಅವರ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
Happy birthday Gopala Krishna Sir 🌷🙏🌷
ಕಾಮೆಂಟ್‌ಗಳು