ಸ್ಟಾರ್ ವಾರ್ಸ್
ಸ್ಟಾರ್ ವಾರ್ಸ್
ಇವತ್ಯಾಕೆ ಸ್ಟಾರ್ ವಾರ್ಸ್ ದಿನ? May the Force be with you ಎಂಬ ವಾಕ್ಯ May 4th be with you ಆಗಿದೆಯಂತೆ. ಈ ಕ್ರೇಸಿ ಪ್ರಂಚದಲ್ಲಿ ಯಾವುದಕ್ಕೆ ಎತ್ತಣಿಂದೆತ್ತ ಸಂಬಂಧವಯ್ಯ ಅಂತ ಕೇಳಿದರೆ, "ಈ ಮುಂಡೇದಕ್ಕೆ ಏನೂ ಗೊತ್ತಿಲ್ಲ ಅಂತ ನನ್ನ ಕುರಿತು ಸತ್ಯ ಹೇಳಿ ನಕ್ಕಾರು!". ಈ ಸ್ಟಾರ್ ವಾರ್ಸ್ ಬಗ್ಗೇನೂ ಏನೂ ಗೊತ್ತಿಲ್ಲ. ಆ ತರಹ ಸಿನಿಮಾಗಳಿತ್ತು ಅಂತ ಗೊತ್ತಿತ್ತು. ಈಗೊಂಚೂರು ಓದಿ ಇಲ್ಲಿ ಊದುತ್ತಿರುವೆ.
ಸ್ಟಾರ್ ವಾರ್ಸ್ ಚಲನಚಿತ್ರ ಆಕಾಶಯಾನ ಗೀತನಾಟಕ (ಸ್ಪೇಸ್ ಒಪೇರಾ) ಚರಿತ್ರೆಯಲ್ಲೇ ಒಂದು ಮಹಾಕಾವ್ಯವೆನಿಸಿದ್ದು, ಅಮೇರಿಕಾದ ಸುಪ್ರಸಿದ್ಧ ನಿರ್ದೇಶಕ ಜಾರ್ಜ್ ಲ್ಯೂಕಾಸ್ ನಿರ್ಮಿಸಿ ನಿರ್ದೇಶಿಸಿದ್ದಾರೆ. ಫ್ರಾಂಚೈಸಿಯ ಮೊದಲ ಚಿತ್ರವನ್ನು ಮೂಲತಃ 1977, ಮೇ 25ರಂದು 20ನೇ ಸೆಂಚುರಿ ಫಾಕ್ಸ್ ಬಿಡುಗಡೆ ಮಾಡಿತು. ಇದು ವಿಶ್ವಾದ್ಯಂತ ಪಾಪ್ ಸಂಸ್ಕೃತಿಯ ಅಪೂರ್ವ ವಿದ್ಯಮಾನವೆನಿಸಿತು, ಅಲ್ಲದೆ ಇದರ ಬೆನ್ನಿಗೇ ಮೂರು ವರ್ಷಗಳ ಮಧ್ಯಂತರದಲ್ಲಿ ಇನ್ನೆರಡು ಸೀಕ್ವೆಲ್(ಉತ್ತರಭಾಗದ) ಚಿತ್ರಗಳು ತೆರೆ ಕಂಡವು.
ಟ್ರೈಲಾಜಿ(ತ್ರಿವಳಿ ಕಥೆ)ಯ ಕೊನೆಯದ್ದು ಬಿಡುಗಡೆಯಾಗಿ ಹದಿನಾರು ವರ್ಷಗಳ ನಂತರ, ಹೊಸ ಪ್ರೀಕ್ವೆಲ್ (ಹೋಲಿಕೆಯ ಕಥೆಯಿರುವ) ತ್ರಿವಳಿ ಕಥೆಗಳ ಸುತ್ತ ಹೆಣೆದ ಮೊದಲ ಚಿತ್ರ ಬಿಡುಗಡೆಯಾಯಿತು. ಮೂರು ವರ್ಷಗಳ ಮಧ್ಯಂತರಗಳಲ್ಲಿ ಅದು ಮತ್ತೊಮ್ಮೆ ಬಿಡುಗಡೆಯಾಯಿತು, 2005 ಮೇ 19ರಂದು ಅಂತಿಮ ಚಿತ್ರವೂ ಬಿಡುಗಡೆಯಾಯಿತು. 2008ರ ಹೊತ್ತಿಗೆ ಆರು ಸ್ಟಾರ್ ವಾರ್ಸ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಒಟ್ಟು ಅಂದಾಜು $4.3 ಶತಕೋಟಿ ಆದಾಯ ಗಳಿಸಿವೆ, ಅಲ್ಲದೆ ಜೇಮ್ಸ್ ಬಾಂಡ್ ಮತ್ತು ಹ್ಯಾರಿ ಪಾಟರ್ ಚಲನಚಿತ್ರಗಳ ನಂತರ ಮೂರನೇ ಅತಿ ಹೆಚ್ಚು ಗಳಿಕೆಯ ಚಿತ್ರ ಸರಣಿಯೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಸ್ಟಾರ್ ವಾರ್ಸ್ ಚಿತ್ರ ಸರಣಿಗಳ ಪ್ರಭಾವದಿಂದಾಗಿ ಆ ಕುರಿತ ಪುಸ್ತಕಗಳು, ಟೆಲಿವಿಷನ್ ಸರಣಿಗಳು, ವಿಡಿಯೋ ಆಟಗಳು ಮತ್ತು ವಿನೋದ ಪುಸ್ತಕಗಳು ಹೊರಬಂದವು. ಚಿತ್ರದ ಟ್ರೈಲಾಜಿಗಳಿಗೆ ಪೂರಕವಾಗಿರುವ ಈ ಕೃತಿಗಳಲ್ಲಿ ಸ್ಟಾರ್ ವಾರ್ಸ್ ಎಕ್ಸ್‌ಪಾಂಡೆಡ್ ಯೂನಿವರ್ಸ್ ಇದೆ, ಹೀಗೆ ಕಾಲ್ಪನಿಕ ವಿಶ್ವದ ಕುರಿತ ಸರಣಿಗಳಲ್ಲಿ ಮಹತ್ವದ ಅಭಿವೃದ್ಧಿಗಳಾದವು.
2008ರಲ್ಲಿ ಸ್ಟಾರ್ ವಾರ್ಸ್: ದಿ ಕ್ಲೋನ್ ವಾರ್ಸ್ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಮೂಲ ಟ್ರೈಲಾಜಿಯಿಂದ ಹೊರಬಂದು ಜಗತ್ತಿನಾದ್ಯಂತ ಬಿಡುಗಡೆಯಾದ ಮೊದಲ ಸ್ಟಾರ್ ವಾರ್ಸ್ ಚಿತ್ರವಿದು. ಇದು ಅನಿಮೇಷನ್ ಚಿತ್ರವಾಗಿದ್ದು, ಇದರ ಜತೆಗೆ ಅದೇ ಹೆಸರಿನ ಸರಣಿಗಳಲ್ಲಿ ಎಕ್ಸ್‌ಪಾಂಡೆಡ್ ಯೂನಿವರ್ಸ್ ಬಗ್ಗೆ ಒಂದು ಪರಿಚಯ ನೀಡುವ ಗುರಿ ಕೂಡ ಹೊಂದಲಾಗಿತ್ತು. ಇದು ಈ ಹಿಂದೆ 2D ಅನಿಮೇಷನ್ ಸರಣಿಗಳ ಆಧಾರದಲ್ಲಿ ನಿರ್ಮಿಸಿದ ಅದೇ ಹೆಸರಿನ 3D CGI ಅನಿಮೇಷನ್ ಚಿತ್ರವಾಗಿದೆ.
ಸ್ಟಾರ್ ವಾರ್ಸ್ ನಲ್ಲಿ ಚಿತ್ರಿಸಿರುವ ಘಟನೆಗಳು ಕಾಲ್ಪನಿಕ ಗ್ಯಾಲಕ್ಸಿ(ಆಕಾಶಗಂಗೆ)ಯಲ್ಲಿ ನಡೆಯುತ್ತವೆ. ಅನ್ಯ ಜೀವಿಗಳ(ಆಗಾಗ್ಗೆ ಮಾನವನಂತೆಯೇ ಕಾಣುವ) ಅನೇಕ ವರ್ಗಗಳನ್ನು ಇದರಲ್ಲಿ ಚಿತ್ರಿಸಲಾಗಿದೆ. ರೊಬೊಟಿಕ್ ಡ್ರಾಯಿಡ್ಸ್‌ಗಳು ಮಾಮೂಲಿ ಸ್ಥಾನದಲ್ಲಿರುತ್ತವೆ ಮತ್ತು ಸಾಮಾನ್ಯವಾಗಿ ಮಾಲೀಕರ ಅವಶ್ಯಕತೆಗಳನ್ನು ಪೂರೈಸಲು ಇದನ್ನು ರೂಪಿಸಿರಲಾಗುತ್ತದೆ. ಬಾಹ್ಯಾಕಾಶಯಾನ ಸಾಮಾನ್ಯ, ಮತ್ತು ಗ್ಯಾಲಕ್ಸಿಯಲ್ಲಿರುವ ಅನೇಕ ಗ್ರಹಗಳು ಗ್ಯಾಲಕ್ಟಿಕ್ ರಿಪಬ್ಲಿಕ್( ಗ್ಯಾಲಕ್ಸಿ ಸಮುದಾಯ)ನ ಸದಸ್ಯರಾಗಿರುತ್ತವೆ, ನಂತರ ಗ್ಯಾಲಕ್ಟಿಕ್ ಎಂಪೈರ್(ಸಾಮ್ರಾಜ್ಯ) ಆಗಿ ಪುನರ್-ಸಂಘಟಿತಗೊಂಡಿರುತ್ತವೆ.
"ಫೋರ್ಸ್" ಸ್ಟಾರ್ ವಾರ್ಸ್ ನ ಪ್ರಮುಖ ಅಂಶಗಳಲ್ಲಿ ಒಂದು, ಅದು ಶಕ್ತಿಯ ಸರ್ವವ್ಯಾಪಿ ರೂಪವಾಗಿದ್ದು, ಅದೇ ಸಾಮರ್ಥ್ಯವುಳ್ಳ ಮಂದಿ ಮಾತ್ರವೇ ಅದನ್ನು ಬಳಸಬಹುದು. ಇದನ್ನು ಮೊದಲು ನಿರ್ಮಾಣಗೊಂಡ ಚಿತ್ರದಲ್ಲಿ ಈ ರೀತಿ ವರ್ಣಿಸಲಾಗಿದೆ; "ನಮ್ಮ ಸುತ್ತಮುತ್ತಲಿರುವ, ನಮ್ಮನ್ನು ವ್ಯಾಪಿಸಿರುವ, (ಮತ್ತು) ಗ್ಯಾಲಕ್ಸಿಗಳನ್ನು ಜೊತೆಗೂಡಿಸಿರುವ ಎಲ್ಲ ಜೀವಿಗಳಿಂದ ಸೃಷ್ಟಿಸಲ್ಪಟ್ಟ ಒಂದು ಶಕ್ತಿ" ಈ ಫೋರ್ಸ್ ಅತೀಂದ್ರಿಯ ಕಾರ್ಯಗಳನ್ನು (ಟೆಲಿಕೈನೆಸೀಸ್, ದಿವ್ಯದೃಷ್ಟಿ, ಪೂರ್ವಜ್ಞಾನ ಮತ್ತು ಮನೋನಿಯಂತ್ರಣ ಇತ್ಯಾದಿ) ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ, ಅಲ್ಲದೆ ವೇಗ ಮತ್ತು ಅನುವರ್ತನಗಳಂತಹ ಕೆಲವು ನಿರ್ದಿಷ್ಟ ದೈಹಿಕ ಲಕ್ಷಣಗಳನ್ನು ವರ್ಧಿಸಲು ಫೋರ್ಸ್‌ನಿಂದ ಸಾಧ್ಯವಾಗಬಹುದು; ಈ ಸಾಮರ್ಥ್ಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಮತ್ತು ಸೂಕ್ತ ತರಬೇತಿ ಮೂಲಕ ಸುಧಾರಿತಗೊಳ್ಳಲೂಬಹುದು.
ಫೋರ್ಸ್ ಅನ್ನು ಉತ್ತಮ ಉದ್ದೇಶಕ್ಕಾಗಿಯೂ ಬಳಸಿಕೊಳ್ಳಬಹುದು, ಆದರೆ ಇದಕ್ಕೆ ದುಷ್ಟ ಮುಖವೂ ಇದೆ. ಇದು ಬಳಕೆದಾರನಲ್ಲಿ ದ್ವೇಷ, ಆಕ್ರಮಣಶೀಲತೆ, ಮತ್ತು ಕೇಡನ್ನು ತುಂಬಿಸಿ ಕೆಟ್ಟ ಕಾರ್ಯಕ್ಕೆ ಪ್ರೇರೇಪಿಸಬಹುದು. ಹೀಗೆ ಕಥಾನಕ ಸಾಗುತ್ತದೆ.
ಕೃಪೆ: ಕನ್ನಡ ವಿಕಿಪೀಡಿಯಾ. ಇಲ್ಲಿರುವ ವಿವರ ವಿಕಿಪೀಡಿಯಾ ಲೇಖನದಲ್ಲಿನ ಒಂದು ತುಣುಕು ಅಷ್ಟೇ.
On Star Wars Day
ಕಾಮೆಂಟ್‌ಗಳು