ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರತ್ನಾ ಅಂಗಡಿ


 ರತ್ನಾ ಅಂಗಡಿ 


ಕವಯತ್ರಿ, ಅಪಾರ ಕನ್ನಡ ಪ್ರೇಮಿ, ಒಳ್ಳೆಯದನ್ನೆಲ್ಲ ಬೆಂಬಲಿಸುವ ಶುದ್ಧ ಅಂತರಂಗದ ರತ್ನಾ ಅಂಗಡಿ ಅವರ ಹುಟ್ಟು ಹಬ್ಬವಿದು.

ರತ್ನಾ ಅಂಗಡಿ ಅವರ ಗೋಡೆ ನೋಡುತ್ತಿದ್ದರೆ ಇವರಿಗೆ ಅದೆಷ್ಟೊಂದು ಬಹುಮಾನ ಬಂದಿದೆ ಎಂದು ವಿಸ್ಮಯದ ಸಂತಸ ಆವರಿಸುತ್ತೆ.

"ಹೆಣ್ಣೆಂದರೆ ಹೀಗೇ ಇರಬೇಕೆಂಬ
ಭ್ರಮೆಯ ದರ್ಪಣ
ಸ್ವಚ್ಛಗೊಳಿಸಿಕೊಳ್ಳಲಿ
ಅವಳಿಗೂ ಅವಳದೆ ವ್ಯಕ್ತಿತ್ವ
ಮನವಿದೆ ಗೌರವಿಸಿ
ಸ್ವಚ್ಛಂದ ವನದಲಿ ನಾರಿ
ಬಾಳು ಹೂವಂತೆ ನಗುತ್ತಿರಲಿ"

ಹೀಗೆ ಸಾಗುತ್ತದೆ ಇವರ ರತ್ನಕವಿತೆ. ಕಡಲಿನಂತೆ ಕವಯತ್ರಿಯ ಮನಸು ಎಂಬಂತೆ ಇವರ ಮನಸೊಂದು ಭಾವಾಂತರಾಂಗದ ರತ್ನಕಡಲು.

ನನ್ನ ಕನ್ನಡ ಕಾಯಕವನ್ನು ಅವಿರತವಾಗಿ ಪ್ರೋತ್ಸಾಹಿಸುತ್ತ ಬಂದಿರುವ ಈ ವಿಶಾಲ ಹೃದಯಿಗೆ ನಾ ಸದಾ ಋಣಿ.

ರತ್ನಾ ಅಂಗಡಿ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 
🎂🎉🍰🎁🍦💐😊

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ