ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ


ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ
ನಿನಗೆಂದೇ ಬರೆದ ಪ್ರೇಮದ ಓಲೆ
ಅದ ಓದಲು ಹರಿವುದು ಜೇನಿನಾ ಹೊಳೆ....
ನಾ ಓದಿದೆ ಒಲವಿನೋಲೆಯನು
ಮನಸಾರೆ ನಾ ಮುತ್ತನಿತ್ತೆನು
ಹೆರಳೇರಿಸಿ ನಿನ್ನ ನೆರಳ ಕಂಡೆನು....
ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ
ನಿನಗೆಂದೇ ಬರೆದ ಪ್ರೇಮದ ಓಲೆ

ನಿನ್ನಾಸೆಯ ನೋಟದ ಕಥೆಯೇನು
ಸೆರೆ ಮೀರದ ಯೌವನ ಜತೆಯೇನು
ಬೆಳದಿಂಗಳ ಹುಣ್ಣಿಮೆ ಮಾತೇನು
ಆ ಹುಣ್ಣಿಮೆ ಮಾತನಾಡಿತು
ನನ ಕಣ್ಣಲಿ ಮನೆಯ ಮಾಡಿತು
ಸರಿತೂಗುವ ಬೆಳಕಲಿ ಕೂಡಿ ಆಡಿತು
ನಾ ಮುಡಿದ ಮಲ್ಲಿಗೆ ಹೂವಿನ ಮಾಲೆ
ನನಗೆಂದೇ ಬರೆದ ಪ್ರೇಮದ ಓಲೆ

ಮಧುಮಾಸದಿ ಹಾಡುವ ಕೋಗಿಲೆಯ
ಆಕಾಶದೆ ತೂಗುವ ಸಿಹಿ ನುಡಿಯ
ಅನುರಾಗದ ಅಲೆಯಲಿ ತೇಲಿ ಹೋಗುವೆ
ತೇಲಾಡುವ ದೋಣಿ ನೀನಾದೆ
ನೀನೋಡುವ ನೋಟಕೆ ಕಣ್ಣಾದೆ
ಅದು ತೋರಿದ ಊರಿಗೆ ಸಾಗಿ ಹೋಗುವೆ
ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ
ನಿನಗೆಂದೇ ಬರೆದ ಪ್ರೇಮದ ಓಲೆ

ಚಿತ್ರ: ಗಾಂಧೀನಗರ
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ಸತ್ಯಂ
ಗಾಯನ : ಪಿ.ಬಿ. ಶ್ರೀನಿವಾಸ್, ಪಿ.ಸುಶೀಲ
Tag: Nee mudida mallige hoovina maale

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ