ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ಕನ್ನಡದ
ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ
ಜಯಭೇರಿ ನಾವಾದೆವೆನ್ನಿ
ಕನ್ನಡದ ಮಕ್ಕಳೆಲ್ಲ
ಒಂದಾಗಿ ಬನ್ನಿ
ತಾಯ್ನಾಡ
ಜಯಭೇರಿ ನಾವಾದೆವೆನ್ನಿ
ಗೆಳೆತನದ
ವರದ ಹಸ್ತ ನೀಡಿ ಬನ್ನಿ
ಮೊಳೆತಿರುವ
ಭೇದಗಳ ಬಿಟ್ಟು ಬನ್ನಿ
ಕನ್ನಡದ ಮಕ್ಕಳೆಲ್ಲ
ಒಂದಾಗಿ ಬನ್ನಿ
ತಾಯ್ನಾಡ
ಜಯಭೇರಿ ನಾವಾದೆವೆನ್ನಿ
ಒಂದು
ತಾಯಿಯ ಮಡಿಲ ಮಕ್ಕಳೆನ್ನಿ
ಒಂದು
ತಾಯಿಯ ನುಡಿಯ ನುಡಿವೆವೆನ್ನಿ
ಕೀಳು
ನಾವೆಂಬುವರ ಕಣ್ತೆರೆಯಿರೆನ್ನಿ
ಬೀಳು
ನಾವೆಂಬುವರ ಬಾಯ್ಮುಚ್ಚ ಬನ್ನಿ
ಕನ್ನಡದ ಮಕ್ಕಳೆಲ್ಲ
ಒಂದಾಗಿ ಬನ್ನಿ
ತಾಯ್ನಾಡ
ಜಯಭೇರಿ ನಾವಾದೆವೆನ್ನಿ
ಕನ್ನಡದ
ಮಕ್ಕಳೆಲ್ಲ ಒಂದಾಗಿ ಬನ್ನಿ
ಗಂಗ
ಕದಂಬಾದಿ ಚಾಲುಕ್ಯ ರಾಷ್ಟ್ರಕೂಟ
ಯಾದವ
ಬಲ್ಲಾಳ ವಿಜಯನಗರ ವೀರರ
ಗತ
ವೈಭವ ಕಾಣುವ
ನವಶಕ್ತಿಯ
ತುಂಬುವ
ಭುವನೇಶ್ವರಿ
ನೀಡುವ ಸಂದೇಶವ ಸಾರುವ
ಕನ್ನಡದ
ಮಕ್ಕಳೆಲ್ಲ ಒಂದಾಗಿ ಬನ್ನಿ
ತಾಯ್ನಾಡ
ಜಯಭೇರಿ ನಾವಾದೆವೆನ್ನಿ
ಕನ್ನಡದ ಮಕ್ಕಳೆಲ್ಲ
ಒಂದಾಗಿ ಬನ್ನಿ
ಚಿತ್ರ: ಕಣ್ತೆರೆದು ನೋಡು
ಸಾಹಿತ್ಯ: ಜಿ. ವಿ.
ಅಯ್ಯರ್
ಸಂಗೀತ ಮತ್ತು ಗಾಯನ:
ಜಿ. ಕೆ. ವೆಂಕಟೇಶ್
Tag: Kannada Makkalella ondagi banni
ಕಾಮೆಂಟ್‌ಗಳು