ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗಣಪತಿ ಸಚ್ಚಿದಾನಂದ


 ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ


ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಅವಧೂತ ದತ್ತ ಪೀಠಾಧಿಪತಿಗಳಾಗಿ ಆಧ್ಯಾತ್ಮಸಾಹಿತ್ಯಸಂಗೀತಸಮಾಜ ಸೇವೆಸಾಂಸ್ಕತಿಕ ಮತ್ತು ಪ್ರಕೃತಿ ಪೋಷಣೆ ಹೀಗೆ ಹಲವು ವಿಧದಲ್ಲಿಹೆಸರಾದವರು.


ಗಣಪತಿ ಸಚ್ಚಿದಾನಂದ ಸ್ವಾಮೀಜಿ 1942 ಮೇ 26ರಂದು ಕಾವೇರಿ ತೀರದ ಮೇಕೆದಾಟುವಿನಲ್ಲಿಜನಿಸಿದರು ಅವರ ಅಂದಿನ ಹೆಸರು ಸತ್ಯನಾರಾಯಣತಂದೆ ನರಸಿಂಹ ಶಾಸ್ತ್ರಿ ತಾಯಿಜಯಲಕ್ಷ್ಮೀ.  


ಆಧ್ಯಾತ್ಮ ಪೃವೃತ್ತಿ ರೂಢಿಸಿಕೊಂಡಿದ್ದ ತಾಯಿಯೇ ಇವರಿಗೆ ದೀಕ್ಷೆ ಕೊಟ್ಟರಂತೆ.

ಶಾಲೆಯ ಪಾಠಗಳು ರುಚಿಸದ ಸತ್ಯನಾರಾಯಣ ಗೆಳೆಯರೊಂದಿಗೆ ಸತ್ಸಂಗ ಭಜನೆಗಳಲ್ಲಿ ಹೆಚ್ಚುಆಸಕ್ತರಾದರುಸ್ವಾಮೀಜಿ 1966ರಲ್ಲಿ ಈಗ ಅವರ ಆಶ್ರಮವಾಗಿರುವ ಮೈಸೂರಿನ ಜಾಗಕ್ಕೆಬಂದರು ದೇಶದೆಲ್ಲೆಡೆ ಸಂನ್ಯಾಸಿಯಾಗಿ ತಮ್ಮ ಭಜನೆಸತ್ಸಂಗಧ್ಯಾನಯೋಗ ತರಬೇತಿಗಳಿಂದಬಹು ಜನ ಅನುಯಾಯಿಗಳನ್ನು ಗಳಿಸಿದರುದೇಶದೆಲ್ಲೆಡೆ ದತ್ತಾತ್ರೇಯ ದೇಗುಲಅನ್ನಪೂರ್ಣೆದೇಗುಲ ಮತ್ತು ಹನುಮಾನ್ ದೆಗುಲ ಹೀಗೆ ಹಲವು ದೇಗುಲಗಳ ಆವರಣ ಇರುವ  ಪೀಠ ಅಥವಾಆಶ್ರಮಗಳನ್ನು ತೆರೆದರು ವಿದೇಶಗಳಲ್ಲೂ ಬಹು ಸಂಖ್ಯೆಯಲ್ಲಿ ಅವರ ಅನುಯಾಯಿಗಳು ಮತ್ತುಆಶ್ರಮಗಳು ವ್ಯಾಪಿಸಿದವು.


ಸ್ವಾಮೀಜಿ ಹಲವು ಭಾಷೆಗಳಲ್ಲಿ ಭಕ್ತಿ ಸಾಹಿತ್ಯ ರಚಿಸುತ್ತ ಬಂದಿದ್ದಾರೆ ಸುಶ್ರಾವ್ಯವಾಗಿ ಹಾಡುತ್ತಾರೆಪ್ರವಚನ ನೀಡುತ್ತಾರೆ ಅವರ ಹಲವು ಭಾಷೆಯ ಹಲವು ಸಹಸ್ರ  ಗೀತರಚನೆಗಳು ಸುಮಾರು50ಕ್ಕೂ ಹೆಚ್ಚು ಆಲ್ಬಮ್ಗಳಲ್ಲಿ ವ್ಯಾಪಿಸಿವೆಅಂಕಣ ಬರೆಯುತ್ತಾರೆಎಲ್ಲ ಭಕ್ತಿ ಜನಪ್ರಿಯಮಾಧ್ಯಮಗಳಲ್ಲಿ ಕಾಣುತ್ತಾರೆ.


ಸ್ವಾಮೀಜಿ ಅವರು ಆಸ್ಪತ್ರೆಗಳನ್ನು ನಿರ್ಮಿಸಿ ಬಡ ಜನರಿಗೆ ಉಪಯುಕ್ತ ಕೆಲಸ ಮಾಡಿದ್ದಾರೆಅವರು ನಿರ್ಮಿಸುವ ದೇಗುಲ ಪೀಠಗಳು ಮನೋಹರ ವಾತಾವರಣಶ್ರೀಮಂತ ಸಾಂಸ್ಕೃತಿಕ  ವೇದಿಕೆ ಮತ್ತು ಭವ್ಯ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವಕ್ಕೆ ಹೆಸರಾಗಿವೆ ಶುಕವನದಂತಹ ಅಪರೂಪದ ಸುಸಜ್ಜಿತ ಪಕ್ಷಿಸಂಕುಲಗಳ ಪೋಷಣೆ ಮತ್ತು ಶುಶ್ರೂಷೆಗಳ ತಾಣನಿರ್ಮಿಸಿದ್ದಾರೆ.




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ