ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ರಘುಪತಿ


 ಎಂ. ರಘುಪತಿ 


ರಾಜಕೀಯದಲ್ಲಿ ಪ್ರಾಮಾಣಿಕತೆ ಇಲ್ಲ ಎನ್ನುವ ಈ  ಲೋಕದಲ್ಲಿ ಪ್ರಾಮಾಣಿಕರಾಗಿದ್ದವರು ಹೆಚ್ಚು ನೆನಪಿಗೆ ಬರುವುದಿಲ್ಲ.  ಇಂದು ಪ್ರಾಮಾಣಿಕತೆಗೆ ಹೆಸರಾಗಿದ್ದ ರಾಜಕಾರಣಿ ಎಂ. ರಘುಪತಿ ಅವರ ಸಂಸ್ಮರಣೆ ದಿನ.

ಎಂ. ರಘುಪತಿ ಅವರು ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದರು.

ಶಿವಾಜಿನಗರ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ಅವರು, ಒಂದು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. 

ಇದು ಪತ್ರಿಕೋದ್ಯಮದಲ್ಲಿ ಹಿರಿಯರಾದ ಶೇಷಚಂದ್ರಿಕ Sesha Chandrika ಅವರ ಮಾತು:

"ರಘುಪತಿ ಬಗೆಗೆ ಹೇಳುವುದು ಬಹಳಷ್ಟಿದೆ.
ರಾಜಕಾರಣಿ ಆಗಲು ಈತ ಅರ್ಹ ಆಗಲೇ ಇಲ್ಲ.
ಯಾಕೆಂದರೆ ರಘುಪತಿ ಮಾನವೀಯ ಅಂತ:ಕರಣದ ಸಾಕಾರ ಮೂರ್ತಿ. ಕಷ್ಟದಲ್ಲಿರುವವರಿಗೆ ಮುಕ್ತಹಸ್ತ. ಕರ್ಣ. ತನ್ನ ಜೇಬಿನಲ್ಲಿ ಹಣ ಇಲ್ಲದಿದ್ದರೆ, ಬೇರೆಯವರನ್ನು ಕಾಡಿಬೇಡಿ ದೇಹಿ ಎಂದು ಬಂದವರಿಗೆ ದಾನ ಮಾಡುತ್ತಿದ್ದ ಉದಾರಿ. ಈ ಗುಣದಿಂದಲೇ
ಇದ್ದದ್ದನ್ನೆಲ್ಲ ಕಳೆದುಕೊಂಡ. ಆಯಿತು. ಬಿಡಿ.
ತಿಮ್ಮಪ್ಪನ ಭಕ್ತ. ದೇವರನ್ನು ಸೇರಿಕೊಂಡ."

ಎಂ. ರಘುಪತಿ  2022ರ ಜೂನ್ 18ರಂದು ನಿಧನರಾದರು.

Respects to departed soul M. Raghupati 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ