ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದಾದಾಪೀರ್ ಜೈಮನ್


 ಯುವ ಕವಿ ದಾದಾಪೀರ್ ಜೈಮನ್‌ ಮತ್ತು
ಬಾಲಸಾಹಿತಿ ತಮ್ಮಣ್ಣ ಬೀಗಾರ
ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ


ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ 2022ರ ಯುವ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿರಸಿಯ ಸಿದ್ದಾಪುರದ ತಮ್ಮಣ್ಣ ಬೀಗಾರ ಅವರು ಬಾಲ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.

ದಾದಾಪೀರ್ ಅವರಿಗೆ ‘ನೀಲಕುರಿಂಜಿ’ ಕಥಾ ಸಂಕಲನಕ್ಕೆ ಹಾಗೂ ತಮ್ಮಣ್ಣ ಬೀಗಾರ ಅವರಿಗೆ ‘ಬಾವಲಿ ಗುಹೆ’ ಮಕ್ಕಳ ಕಾದಂಬರಿಗಾಗಿ ಪ್ರಶಸ್ತಿ ದೊರೆತಿದೆ.

‘ನೀಲಕುರಿಂಜ’ಯನ್ನು ರಾಯಚೂರು ಜಿಲ್ಲೆಯ ಕೆ. ಗುಡುದಿನ್ನಿಯ ವೈಷ್ಣವಿ ಪ್ರಕಾಶನವು ಪ್ರಕಟಿಸಿದ್ದರೆ ‘ಬಾವಲಿ ಗುಹೆ’ಯನ್ನು ಬೆಂಗಳೂರಿನ ಅಭಿನವ ಪ್ರಕಾಶನ ಪ್ರಕಟಿಸಿದೆ.

ನಮ್ಮ ಕನ್ನಡದ ಪ್ರತಿಭೆಗಳಿಗೆ ಮತ್ತು ಪ್ರಕಾಶಕರಿಗೆ ಹೃತ್ಪೂರ್ವಕ ಅಭಿನಂದನೆಗಳು

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ