ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಂದರ್ ವೀಣಾ



 ಸುಂದರ್ ವೀಣಾ - ವೀಣಾ ಸುಂದರ್


ವೀಣಾ ಸುಂದರ್ ಅಂದ್ರೂ ಒಂದೇ, ಸುಂದರ್ ವೀಣಾ ಅಂದ್ರೂ ಒಂದೇ. 

ಇವತ್ತು ಸುಂದರ್ ವೀಣಾ ಹುಟ್ಟುಹಬ್ಬ ಅಂತ ನೋಡ್ದೆ.  ಸುಂದರ್ ವೀಣಾ ಅಂದರೆ ವೀಣಾನೊ, ಸುಂದರರೊ! "ವೀಣೆಯಲ್ಲಿ ಸುಂದರತೆಯೊ, ಸುಂದರತೆಯಲಿ ವೀಣೆಯೊ... ವೀಣಾ ಸುಂದರರು ಕಲೆಯೊಳಗೊ" ಎಂದು ಹಾಡುವಂತಾಯ್ತು. ಈ ಸುಂದರ ಸಂತಸ ಜೋಡಿ ಕಲಾವಿದರಾಗಿ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಪ್ರಖ್ಯಾತರು.

ಅಕ್ಟೋಬರ್ 20 ಸುಂದರ್ ವೀಣಾ ಹುಟ್ಟಿದ ಹಬ್ಬ.  

ಸುಂದರ್ ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚೆ ಕಾಲೇಜಿನಲ್ಲಿ ಶಿಕ್ಷಕರಾಗಿದ್ದರು. ಸುಂದರ್ ಅನೇಕ ಪ್ರಖ್ಯಾತ ಧಾರಾವಾಹಿಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸುವುದರ ಜೊತೆಗೆ ಧಾರಾವಾಹಿಗಳಿಗೆ ಮತ್ತು ಚಲನಚಿತ್ರಗಳಿಗೆ ಸಂಭಾಷಣೆಯನ್ನೂ ಬರೆಯುತ್ತಿದ್ದಾರೆ.

ವೀಣಾ ಅವರು ಅನೇಕ ರೀತಿಯ ಪಾತ್ರಗಳಿಗೆ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಹೆಸರಾಗಿದ್ದು 'ಆ ಕರಾಳ ರಾತ್ರಿ' ಚಿತ್ರದ ಅಭಿನಯಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಗಳಿಸಿದ್ದಾರೆ. 

ವೀಣಾ ಸುಂದರ್ ದಂಪತಿಗಳು ರಂಗಭೂಮಿಯಿಂದ ಹಿನ್ನಲೆ ಹೊಂದಿದವರು. 'ಸುವ್ವಿ' ಎಂಬ ಹೆಸರಿನಲ್ಲಿ ನಾಟಕ ತಂಡವನ್ನೂ ಹುಟ್ಟುಹಾಕಿದ್ದಾರೆ. ಈ ದಂಪತಿಗಳಿಗೆ ಅನರ್ಘ್ಯ ಮತ್ತು ಅಭಿಜ್ಞ ಮಕ್ಕಳಿದ್ದಾರೆ.

ಈ ಸಮಸ್ತ ಕುಟುಂಬಕ್ಕೆ ಶುಭಾಶಯ ಹೇಳೋಣ.  

Sunder Veena, Veena Sunder

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ