ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಆರ್. ಪಾವಂಜೆ


 

ಮಾಧವ ರಾವ್ ಪಾವಂಜೆ



ಮಾಧವ ರಾವ್ ಪಾವಂಜೆ ಮಹಾನ್ ಕಲಾವಿದರಾಗಿದ್ದವರುಇಂದು ಅವರ ಸಂಸ್ಮರಣೆ ದಿನ


ಭಾರತೀಯ ಕಲಾಲೋಕದಲ್ಲಿ ಪಾವಂಜೆ ಕುಟುಂಬ ದೊಡ್ಡ ಹೆಸರುಹತ್ತೊಂಬತ್ತನೆಯಶತಮಾನದಲ್ಲಿ ಗೋಪಾಲಕೃಷ್ಣಯ್ಯ ಪಾವಂಜೆ ಅವರಿಂದ ಪ್ರಾರಂಭಗೊಂಡ ಕಲಾಸೇವೆ ಇಂದಿನಆ‍ ಕುಟುಂಬದ ತಲೆಮಾರಿನಲ್ಲೂ ನಿರಂತರವಾಗಿ ಹರಿಯುತ್ತಿದೆನಮ್ಮ ಆತ್ಮೀಯರಾದ ಅನುಪಾವಂಜೆ Anu Pavanje ಅವರೂ   ಕುಟುಂಬದ ಕಲಾವಿದೆ.


ಗೋಪಾಲಕೃಷ್ಣಯ್ಯ ಪಾವಂಜೆ ಅವರ ಮೂವರು ಮಕ್ಕಳಲ್ಲಿ ಒಬ್ಬರಾದ ಪಾವಂಜೆ ಭುಜಂಗರಾವ್ಅವರ ಪುತ್ರರು  ಮಾಧವ ರಾವ್ ಪಾವಂಜೆ ಎಂಆರ್ಪಾವಂಜೆ ಎಂಬುದು ಇವರ ಹೆಸರಿನಕಿರು ರೂಪ ತಾಯಿ ಭಾರತಿ ರಾವ್ಮಾಧವ ರಾವ್ ಪಾವಂಜೆಯವರು ಇವರ ಮೂರು ಹೆಣ್ಣು , ನಾಲ್ಕು ಗಂಡು ಮಕ್ಕಳಲ್ಲಿ ಮೂರನೆಯ ಮಗನಾಗಿ 1942 ಆಗಸ್ಟ್ 26ರಂದು ಜನಿಸಿದರುತಂದೆಭುಜಂಗ ರಾಯರೂ ಕಲೆಯನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡವರುಅಜ್ಜದೊಡ್ಡಪ್ಪಎಲ್ಲರೂ ಕಲಾವಿದರೇಕುಟುಂಬದ ವಾಹಿನಿಯಲ್ಲಿ ಕಲಾ ಶಿಕ್ಷಣ ತಾನೇ ತಾನಾಗಿ ಪ್ರವಹಿಸುತ್ತಿತ್ತು.


ಬಾಲ್ಯದಿಂದಲೇ ಮಾಧವ ರಾವ್ ಅವರಿಗೆ ಬಣ್ಣದೊಂದಿಗಿನ ಆಟಗಳ ಬದುಕು ಪಾಠ ಸಹಜವೇಎಂಬಂತೆ ಪ್ರಾಪ್ತವಾಗಿತ್ತುಮನೆಗೆ ಭೇಟಿ ನೀಡುತ್ತಿದ್ದ ಪ್ರಸಿದ್ಧ ಕಲಾವಿದರು ಮತ್ತು ಕಲಾ ಶಿಕ್ಷಣಕ್ಕಾಗಿಪಾವಂಜೆ ಮನೆಗೆ ಬರುವ ವಿದ್ಯಾರ್ಥಿಗಳನ್ನು ನೋಡುತ್ತಾ ಅವರ ಕಲೆಯನ್ನು ನೋಡುತ್ತಾ ಮಾತುಕತೆಗಳನ್ನು ಕೇಳುತ್ತಾ ಮಾಧವ ರಾವ್ ಬೆಳೆದರು.


ಮಾಧವ ರಾವ್ ಮಂಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿರುವ ಸೆಂಟ್ರಲ್ ವಾರ್ಡ್ ಶಾಲೆಯಲ್ಲಿ ಪ್ರಾಥಮಿಕಶಿಕ್ಷಣ ಪಡೆದ ಮೇಲೆ ಕೆನರಾ ಹೈಸ್ಕೂಲಿನಲ್ಲಿ ಮುಂದಿನ ಶಿಕ್ಷಣ ಪಡೆದರುತಂದೆಭುಜಂಗರಾಯರೂ ಕಲಾ ಅಧ್ಯಾಪಕರಾಗಿ ಕೆನರಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು


ಬದುಕನ್ನು ಸಾಗಿಸುವುದಕ್ಕೆ ಅನುವಾಗಲೆಂದು ಮಾಧವ ರಾವ್ ತಮ್ಮ ಅಜ್ಜಗೋಪಾಲಕೃಷ್ಣಯ್ಯನವರ ಶಿಷ್ಯಂದಿರಾದ ಎಲ್.ಕೆಶೇವಗೂರರಲ್ಲಿ ಕಮರ್ಶಿಯಲ್ ಆರ್ಟ್‌ನಲ್ಲಿಶಿಕ್ಷಣ ಪಡೆದರುಜೀವನ ನಿರ್ವಹಣೆಯ ಹಾದಿಯಲ್ಲಿ ಹಲವು ವರ್ಷಗಳ ಕಾಲ ಅವರು ಹಲವಾರುಜಾಹೀರಾತುಗಳನ್ನು ರಚಿಸಿ ಪ್ರಸಿದ್ಧರಾದರು


ಮಾಧವ ರಾವ್ ಮುಂದೆ  ಬ್ರಿಟಿಷ್ ಇನ್ಸಿಟ್ಯೂಟ್ ಆಫ್ ಆರ್ಟ್ಸ್‌ನಿಂದ ಕರೆಸ್ಪಾಂಡೆನ್ಸ್  ಆರ್ಟ್ಸ್ಕೋರ್ಸನ್ನು ಮುಗಿಸಿ ಕಲೆಯ ಜ್ಞಾನದ ಬಗ್ಗೆ ಅರಿವನ್ನು ವಿಸ್ತರಿಸಿಕೊಂಡರುಖ್ಯಾತ ಕಲಾವಿದ ಕೆ.ಕೆಹೆಬ್ಬಾರರು ಮಾಧವ ರಾವ್ ಪಾವಂಜೆ ಅವರ  ಅಜ್ಜ ಮತ್ತು ದೊಡ್ಡಪ್ಪನವರಿಂದ ಚಿತ್ರಕಲೆಯಮೂಲ ಪಾಠಗಳನ್ನು ಕಲಿತುಕೊಂಡು ಮಹಾನ್ ಕಲಾವಿದರಾಗಿ ಅರಳಿದವರುಮಾಧವ ರಾವ್ಮುಂಬೈಗೆ  ಹೋದಾಗಲೆಲ್ಲಾ ಕೆ.ಕೆಹೆಬ್ಬಾರರಿಂದ ಸ್ಫೂರ್ತಿ ಮತ್ತು ಪ್ರೇರಣೆಯನ್ನು ಪಡೆಯುತ್ತಿದ್ದರುಹಾಗೆಯೇ ಹೆಬ್ಬಾರರೂ ಊರಿಗೆ ಬಂದಾಗಲೆಲ್ಲಾ ಇವರನ್ನು ಭೇಟಿಯಾಗುತ್ತಿದ್ದರುಇಂತಹ ಶ್ರೇಷ್ಠಕಲಾವಿದರೊಂದಿಗಿನ ಸಂಬಂಧವು ಅವರ ಕಲೆಯಲ್ಲಿ ಪರಿಪಕ್ವತೆ ತಂದುಕೊಳ್ಳಲು ಪೋಷಣೆನೀಡಿತು


ಕ್ರಮೇಣದಲ್ಲಿ ಮಾಧವರಾಯರು ಚಿತ್ರಕಲೆಯನ್ನು ಒಂದು ಧ್ಯಾನಸ್ಥ ಸ್ಥಿತಿಯಲ್ಲಿ ಸೃಜಿಸುವಶಕ್ತಿಯನ್ನು ಪಡೆದರುತೈಲವರ್ಣಜಲವರ್ಣಪೆನ್ಸಿಲ್ ಶೇಡಿಂಗ್‌ನಂತಹ ಕೃತಿಗಳಿಂದ ಅವರುಕಲಾ ಸಂತೃಪ್ತಿಯನ್ನು ಅರಸಿದರುಅವರ ಕಲಾಕೃತಿಗಳು ಗಾಢವಾದ ಶ್ರದ್ಧೆಯಿಂದಮೂಡಿದವುಗಳಾಗಿವೆಅವರ ಅಜ್ಜ ಗೋಪಾಲಕೃಷ್ಣಯ್ಯನವರ ಧಾರ್ಮಿಕ ಶ್ರದ್ಧೆಮಾಧವರಾಯರಲ್ಲೂ ಹರಿದಿತ್ತುಪ್ರತಿಭಾವಂತ ಸೃಜನಶೀಲ ಕಲಾವಿದ ಮನುಷ್ಯರನ್ನು ಬೆಸೆದುಅವರ ಭಾವನೆಗಳನ್ನು ಅರಳಿಸುವಂತಿರಬೇಕು ಎಂಬುದು ಮಾಧವರಾಯರ  ಜೀವನಸಿದ್ಧಾಂತವಾಗಿತ್ತು


ಮಾಧವ ರಾವ್ ಪಾವಂಜೆಯವರು ಚಿತ್ರಕಲೆಯ ಜೊತೆಗೆ ಇನ್ನಿತರ ಹವ್ಯಾಸಗಳಲ್ಲೂಅರ್ಪಣಾಭಾವದಿಂದ ತೊಡಗಿಕೊಂಡವರುಸಂಗೀತ ಕೇಳುವುದು ಅವರಿಗೆ ಪ್ರಿಯವಾದಹವ್ಯಾಸವಾಗಿತ್ತುಇಷ್ಟವಾದ ಹಾಡುಗಳನ್ನು ಗುನು ಗುನಿಸುತ್ತಾನೆಲದ ಮೇಲೆ ಕುಳಿತು ಚಿತ್ರರಚಿಸಲು ಕುಳಿತರೆ ಅವರು ಲೋಕವನ್ನೇ ಮರೆಯುತ್ತಿದ್ದರು.


ಪ್ರಾಚೀನ ಅಂಚೆ ಚೀಟಿಗಳುನಾಣ್ಯಗಳು ಇತ್ಯಾದಿಗಳ ಅಪೂರ್ವವಾದ ಸಂಗ್ರಹ ಮಾಧವ ರಾವ್ಅವರ ಬಳಿ ಇತ್ತುಭಾರತ ಸರಕಾರ ಮೊತ್ತಮೊದಲು ಹೊರಡಿಸಿದ ಕವರುಕಾರ್ಡ್ಅಂಚೆಚೀಟಿಯಿಂದ ಮೊದಲುಗೊಂಡು ದೇಶ ವಿದೇಶಗಳ ಅಂಚೆ ಚೀಟಿಗಳ ಸಂಗ್ರಹದ ದೊಡ್ಡ ನಿಧಿಯೇಅವರ ಬಳಿ ಇತ್ತುಅವುಗಳನ್ನು ಅವರು ಜೋಡಿಸಿಟ್ಟುಕೊಂಡಿದ್ದ ಕ್ರಮವೂ ಕಲಾತ್ಮಕವಾಗಿತ್ತುಅದೇ ರೀತಿ ಅವರ ಬಳಿ ಇದ್ದ ನಮ್ಮ ನಾಡನ್ನಾಳಿದ ರಾಜರ ಚಿನ್ನಬೆಳ್ಳಿಯ ನಾಣ್ಯಗಳ ಸಂಗ್ರಹವೂಗಣನೀಯವಾಗಿತ್ತುಎಲ್ಲೂ ಕಾಣಸಿಗದ ಕೆಲವು ನಾಣ್ಯಗಳು ಉದಾಹರಣೆಗೆ ಅಳುಪರ ಕಾಲದನಾಣ್ಯಗಳುರೋಮ್ ನಾಣ್ಯಗಳು ಕೂಡಾ ಇವರ ಬಳಿ ಇದ್ದವುಅವರ ಮನೆಯ ಅಟ್ಟದ ಮೇಲಿನಒಂದು ದೊಡ್ಡ ಕೋಣೆ ಹಳೆಯ ಕಾಲದ ವಸ್ತುಗಳಿಂದ ತುಂಬಿತ್ತುಸ್ವಾತಂತ್ರ್ಯ ಪೂರ್ವದ ಹಳೆಯಪತ್ರಿಕೆಗಳುಇಂದು ದುರ್ಲಭವಾದ ಕೆಲವು ಅಮೂಲ್ಯ ಗ್ರಂಥಗಳುಹಿಂದಿನ ದಿನ ಬಳಕೆಯಅಪೂರ್ವ ವಸ್ತುಗಳು ಜೋಪಾನವಾಗಿ  ಮತ್ತು ಆಕರ್ಷಕವಾಗಿ ಅಲ್ಲಿದ್ದವುತುಳು ಲಿಪಿಯಹಳೆಯ ಕೃತಿಗಳೂ ಇವರ ಸಂಗ್ರಹದಲ್ಲಿದ್ದವು.


ಮಾಧವ ರಾವ್ ಪಾವಂಜೆ ಅವರು ದಕ್ಷಿಣ ಕನ್ನಡ ಅಂಚೆ ಚೀಟಿ ಸಂಗ್ರಹಕಾರರ ಸಂಘದಅಧ್ಯಕ್ಷರಾಗಿಯೂ  ಕೆಲಸಮಾಡಿದ್ದರುಮಂಗಳಾ ಪೆಕ್ಸ್ 80 ಬೆಳ್ಳಿ ಪದಕವನ್ನು ಪಡೆದಿದ್ದರು. 84ರಲ್ಲಿ ಅತ್ಯುತ್ತಮ ಸಂಗ್ರಹಕಾರರೆಂಬ ಪ್ರಶಸ್ತಿಯೂ ಸಂದಿತ್ತುಇವರ ಸಂಗ್ರಹಕ್ಕೆ 1986ರಿಂದಮೊದಲುಗೊಂಡಂತೆ ಅನೇಕ ವರ್ಷಗಳು ನಿರಂತರವಾಗಿ ಬಹುಮಾನ ಸಂದಿದ್ದವು 2001ರಲ್ಲಿನಾಸಿಕ್‌ನಲ್ಲಿ ರಾಷ್ಟ್ರಮಟ್ಟದ ಅಂಚೆ ಚೀಟಿ ಪ್ರದರ್ಶನ ಜರುಗಿದಾಗ ಇವರಟ್ರಾವಂಕೂರ್-ಕೊಚ್ಚಿನ್’ ಸಂಗ್ರಹಕ್ಕೆ ರಜತ ಪದಕ ಗೌರವ ಸಂದಿತ್ತು.


ಪಾವಂಜೆ ಕುಟುಂಬದಲ್ಲಿ ಮಾಧವ ರಾವ್ ಪಾವಂಜೆ ಅವರ ಅಜ್ಜತಂದೆದೊಡ್ಡಪ್ಪಂದಿರೆಲ್ಲಾಪ್ರಯತ್ನಶೀಲ ದುಡಿತದಲ್ಲಿ ಸುಖ ಕಂಡವರುಯಶಸ್ಸುಪ್ರಶಸ್ತಿಗಳಿಗಾಗಿ ಹಂಬಲಿಸಿ ಕೈಚಾಚಿದವರಲ್ಲಅದೇ ರೀತಿ ಮಾಧವ ರಾವ್ ಪಾವಂಜೆಯವರೂ ತಮ್ಮನ್ನು  ಗೌರವಿಸುವವರಿಲ್ಲಎಂಬ ಬೇಸರ ಹೊಂದಿದವರಲ್ಲಕಲಾಕೈಂಕರ್ಯದಲ್ಲಿ ತಮ್ಮ ಸಂತೃಪ್ತಿ ಕಂಡುಕೊಂಡವರಾಗಿದ್ದರು.  


ಮಾಧವ ರಾವ್ ಫೇಸ್ಬುಕ್ ಆವರಣದಲ್ಲಿ ನಮ್ಮ ಬರಹಗಳನ್ನು ಆಗಾಗ ಮೆಚ್ಚಿಪ್ರೋತ್ಸಾಹಿಸುತ್ತಿದ್ದರುಸದ್ದುಗದ್ದಲವಿಲ್ಲದೆ ನಮ್ರರಾಗಿದ್ದ ಅವರು ಹಾಗೆಯೇ 2021 ಅಕ್ಟೋಬರ್28ರಂದು ಹೋದದ್ದು ಕೂಡಾ ಅದೇ ನಿಃಶಬ್ಧತೆಯಲ್ಲೇ.


ಮಾಹಿತಿ ಆಧಾರಕನ್ನಡ ಸಂಘ ಕಾಂತಾವರ ಅವರ ನಾಡಿಗೆ ನಮಸ್ಕಾರ ಪುಸ್ತಕ ಸರಣಿ.


On Remembrance Day of great artiste Madhava Rao Pavanje 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ