ವಿದ್ಯಾ ವಿ ಸುವರ್ಣ
ವಿದ್ಯಾ ವಿ ಸುವರ್ಣ
ವಿದ್ಯಾ ವಿ ಸುವರ್ಣ ಅಂದರೆ ನನಗೆ ಮೊದಲು ನೆನಪಾಗವುದು ಅವರು ಪ್ರತಿದಿನ ಆಕರ್ಶಕವಾಗಿ ಬಿಂಬಿಸುವ ಪ್ರೇರಣಾತ್ಮಕ ಅಭಿವ್ಯಕ್ತಿ ರೂಪದ ನುಡಿ ಚಿತ್ರಗಳು. ಅದು ಕೇವಲ ಉದ್ಘೋಷಗಳ ಮಟ್ಟದಲ್ಲಿ ನಿಲ್ಲದೆ, ಅವರ ವ್ಯಕ್ತಿತ್ವದಲ್ಲೂ ಅಂತರ್ಗತವಾಗಿರುವುದು ಸುವರ್ಣ ಅವರ ಶುಭ್ರ ಹಸನ್ಮುಖದ ಭಾವ ಚಿತ್ರಗಳಲ್ಲೂ ಎದ್ದು ಕಾಣುವಂತಿವೆ.
ನವೆಂಬರ್ 6 ವಿದ್ಯಾ ಸುವರ್ಣ ಅವರ ಜನ್ಮದಿನ. ಮಂಗಳೂರಿನ ಸೈಂಟ್ ಆನ್ಸ್ ಹೆಣ್ಣುಮಕ್ಕಳ ಶಾಲೆಯಲ್ಲಿ ಓದಿದ ಅವರು ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ನಡೆಸಿದರು.
ವಿದ್ಯಾ ವಿ ಸುವರ್ಣ ಅವರು 1994ರಿಂದ ರೇಖಿಯ ಅಭ್ಯಾಸಕಾರರೂ ಮತ್ತು ರೇಖಿ ಗುರು/ಮಾರ್ಗದರ್ಶಕಿಯೂ ಆಗಿದ್ದಾರೆ. ಇವರು ವಿಶ್ವಪ್ರಸಿದ್ಧ 'ಯು ಕ್ಯಾನ್ ಹೀಲ್ ಯುವರ್ ಲೈಫ್' ಕೃತಿಕಾರರಾದ ಲೂಯಿಸ್ ಹೇ ಅವರ ತತ್ವಶಾಸ್ತ್ರದ ಆಧಾರದ ಮೇಲೆ ಅಂತರಾಷ್ಟ್ರೀಯ ಪ್ರಸಿದ್ಧಿ ಹೊಂದಿರುವ 'ಹೀಲ್ ಯುವರ್ ಲೈಫ್' ಕಾರ್ಯಾಗಾರ ನೇತೃತ್ವ ವಹಿಸಲು ಪ್ರಮಾಣೀಕೃತರಾಗಿದ್ದಾರೆ. ಅವರು ಪ್ರಾಣಿಕ್ ಹೀಲಿಂಗ್, ಕಾಸ್ಮಿಕ್ ಆಕ್ಟಿವೇಶನ್ ಮತ್ತು ಅಡ್ವಾನ್ಸ್ಡ್ ಚಾನೆಲಿಂಗ್‌ನಲ್ಲಿ ತರಬೇತಿ ಪಡೆದಿದ್ದಾರೆ. ಅವರು ಮಂಡಲ ಥೆರಪಿ, ಕ್ರಿಸ್ಟಲ್ ಹೀಲಿಂಗ್, 'ಏಂಜಲ್ ಕಾರ್ಡ್ ರೀಡಿಂಗ್ ಮತ್ತು ಹೀಲಿಂಗ್ ಥೆರಪಿ' ಮತ್ತು ಡಿಎಮ್‍ಐಟಿ ಕಾರ್ಯಾಗಾರಗಳನ್ನು ನಡೆಸುತ್ತ ಬಂದಿದ್ದಾರೆ.
ವಿದ್ಯಾ ಅವರು 'You and the magic of your affirmations' ಎಂಬ ಪ್ರಸಿದ್ಧ ಕೃತಿಯ ಲೇಖಕಿ. ಸಮಾಜದ ಎಲ್ಲ ವರ್ಗದ ಜನ ಇವರಿಂದ ಸಮಾಲೋಚನೆಗಳನ್ನು ಪಡೆಯುತ್ತಿದ್ದಾರೆ. 'Lotus Core Nurture Programs’ ಎಂಬ ಇವರ ಕಾರ್ಯಕ್ರಮಗಳು ಜನರು ತಮಗೆ ದೈವದತ್ತವಾಗಿ ಲಭ್ಯವಿರುವ ಮೂಲ ಕೊಡುಗೆಗಳನ್ನು ಸಮರ್ಥವಾಗಿ ಪೋಷಿಸಿಕೊಂಡು ಜೀವನವನ್ನು ಉತ್ತಮ ಉದ್ದೇಶಗಳಿಂದ ಮತ್ತು ಸಂತೃಪ್ತಿಯಿಂದ ನಡೆಸಲು ಪ್ರೇರಕವಾಗಿವೆ. ಕೆಲವೊಂದು ಕಲಿಕೆಗಳಿಂದ ಹೊರಬಂದು ಹೊಸತನವನ್ನು ಕಲಿಯುವ ಇವರ ಪಯಣವು (Journey of unlearning and learning) ಅನೇಕ ಮಾರ್ಗದರ್ಶಿಗಳು ಮತ್ತು ಗುರುಗಳಿಂದ ಪ್ರೇರಿತಗೊಂಡಿದ್ದು 'ಪ್ರೀತಿ ಮತ್ತು ಕೃತಜ್ಞತೆ'ಗಳ ಸಾರವನ್ನೊಳಗೊಂಡಿದೆ. ಪ್ರತಿಯೊಬ್ಬರೂ ಸಂಪೂರ್ಣರೇ ಆಗಿದ್ದು, ಪ್ರೀತಿ, ಸಂತೋಷ, ಶಾಂತಿ ಮತ್ತು ಸಮೃದ್ಧಿಯಿಂದ ಜೀವನವನ್ನು ನಡೆಸುವ ಹಕ್ಕನ್ನು ಹೊಂದಿದ್ದಾರೆ ಎಂಬುದು ಇವರ ಅಚಲ ನಂಬಿಕೆ.
ವಿದ್ಯಾ ಅವರ ಬದ್ಧತೆಯು ಅನೇಕರ ಬದುಕಿನಲ್ಲಿ ಬೆಳಕು ತಂದಿದೆ. ಅವರೊಬ್ಬ ಹೊಸ ಹೊಸ ಚಿಂತನೆ, ಕಲಿಕೆ ಮತ್ತು ಮಾರ್ಗದರ್ಶನಗಳ ನಿರಂತರ ಅನ್ವೇಶಕಿ. 'ಲೋಟಸ್ ಕೋರ್ ನರ್ಚರ್ ಪ್ರೋಗ್ರಾಮ್ಸ್' ಎಂಬ ಇವರ ಕಾರ್ಯಕ್ರಮಗಳ ಹೆಸರಿನಲ್ಲಿನ ಕಮಲದ ಕುರಿತಾಗಿ ಇವರು ಹೇಳುವ ನುಡಿ 'ಕೆಸರಿಲ್ಲದೆ ಕಮಲವಿಲ್ಲ' (No Mud, No Lotus!) ಎಂಬುದು ಬದುಕಿನಲ್ಲಿರುವ ವಾಸ್ತವತೆ ಮತ್ತು ಅರಳುವಿಕೆಯ ಸಾಧ್ಯತೆಗಳ ಅನೇಕವನ್ನು ಸಂಕೇತಿಸುವಂತಿವೆ.
ವಿದ್ಯಾ ಸುವರ್ಣ ಅವರು ಸಾಹಿತ್ಯ, ಸಂಗೀತ, ಕಲೆ ಮತ್ತು ಸಂಸ್ಕೃತಿಗಳ ಪ್ರಿಯರು. ಟ್ರೆಕ್ಕಿಂಗ್ ಅಂತಹ ಚಟುವಟಿಕೆಗಳಲ್ಲೂ ಅವರಿಗೆ ಪ್ರೀತಿ ಇದೆ. ಅಂತೆಯೇ ಅವರಲ್ಲಿ ನಮ್ಮಂತಹವರ ಬರವಣಿಗೆಗಳನ್ನು ಓದಿ ಮೆಚ್ಚಿ ಪ್ರೋತ್ಸಾಹಿಸುವ ಹೃದಯ ವೈಶಾಲ್ಯತೆಯೂ ಇದೆ.
ಆತ್ಮೀಯರೂ ಪ್ರಾಜ್ಞರೂ ಆದ ವಿದ್ಯಾ ವಿ ಸುವರ್ಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Vidya V Suvarna 🌷🌷🌷
ಧನ್ಯವಾದಗಳು 🙏
ಪ್ರತ್ಯುತ್ತರಅಳಿಸಿಹುಟ್ಟು ಹಬ್ಬದ ಶುಭಾಶಯಗಳು.
ಪ್ರತ್ಯುತ್ತರಅಳಿಸಿ