ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗೀತಗೋವಿಂದ21


 ಜಯದೇವಕವಿಯ ಗೀತಗೋವಿಂದ

ಅಷ್ಟಪದಿ 20


*ಸಂಕ್ಷಿಪ್ತ ಭಾವ*


ಸಖಿಯು ರಾಧೆಯ ಮನವನ್ನು ಒಲಿಸುತ್ತ ಮಾಧವನೆಡೆಗೆ ಹೋಗುವಂತೆ ಅವಳನ್ನು ಅಲಂಕರಿಸುತ್ತ ನುಡಿಯುವಳು.


ಎಲೈ ಮುಗ್ಧೆ, ನಿನಗಾಗಿ ಮಾಧವನು ಬಂದಿರುವನು. ಅನುನಯದ ನುಡಿಗಳಿಂದ ಅವನು ನಿನ್ನಡಿಗಳಿಗೆರಗಿಹನು. ತಂಪಾದ ಯಮುನೆಯ ತೀರದಲ್ಲಿ ರತಿಕೇಳಿಯ ಶಯನದಲ್ಲಿರುವನು. ನಡೆ.


ಘನವಾದ ಕುಚಗಳ, ಭಾರಿಯಾದ ಜಘನದ ಭಾರದಿಂದ ನಿನಗೆ ವೇಗವಾಗಿ ನಡೆಯಲು ಸಾಧ್ಯವಾಗದುದಕ್ಕೆ ಚಿಂತಿಸದಿರು. ನಿನ್ನ ಮಣಿಮಂಜೀರದ ಶಬ್ದದಿಂದ ರಾಜಹಂಸೆಯಂತೆ ನೀನು ನಡೆಯುವುದು.


ಕೇಳು, ಅಲ್ಲಿ ತರುಣಿಯರನ್ನು ಆಕರ್ಷಿಸುವ ಸುಂದರವಾದ ದುಂಬಿಗಳ ಝೇಂಕಾರವಿದೆ. ಕುಸುಮಶರನ ಆಣತಿಯಂತೆ ಬಂದು ಇಂಪಾದ ದನಿಗೈಯುತ್ತಿರುವ ಕೋಗಿಲೆಗಳ ಬಗ್ಗೆ ಮಧುರ ಭಾವವನ್ನಿಡು.


ದಾರಿಯುದ್ದಕ್ಕೂ ತೋಳುಗಳನ್ನು ಚಾಚಿರುವಂತೆ ಎಳೆಯದಾದ ಚಿಗುರಿನ ಲತೆಗಳನ್ನು ನೋಡು . ನಿನಗೆ ದಾರಿಯನ್ನು ತೋರಿಸುತ್ತಿರುವಂತೆ ಇವೆ. ತಡಮಾಡದಿರು.


ಚೆಲುವಾಗಿ ಬೀಸುತ್ತಿಹ ಗಾಳಿಯು ಹರಿಯ ಆಲಿಂಗನವನ್ನು ಸೂಚಿಸುವ ನೆವದಲ್ಲಿರುವುದು. ನಿನ್ನೆದೆಯ ಮೇಲೆ ನಲಿಯುತ್ತಿರುವ ಹಾರಗಳು ಮೆಲ್ಲನೆ ಸದ್ದು ಮಾಡುತ್ತಿರುವುವು.


ಸಮಸ್ತ ಸಖೀಜನರು ಸುತ್ತಲಿರಲು ನಿನ್ನ ಶರೀರವು ರತಿಸುಖಕೆ ಸಜ್ಜಾಗಿರುವುದು. ಸದ್ದು ಮಾಡುತ್ತಿರುವ ಒಡ್ಯಾಣದೊಂದಿಗೆ ಅಭಿಸಾರಿಕೆ, ನಡೆ, ನಾಚಿಕೆಯೇಕೆ?


ಸುಂದರ ಸುಮಬಾಣಗಳಂತಹ ಕೈಗಳನ್ನು ಹಿಡಿದು ನಡೆ, ರಾಧೆ, ನಡುವೆ ನಿನ್ನ ಕೈ ಬಳೆಗಳ

ಘಲಿರೆನ್ನುವ ಶಬ್ದದಿಂದ ಹರಿಯನ್ನು ಎಚ್ಚರಿಸು.  ಅವನು ಬೇಟದೆಡೆಗೆ ಬರುವನು.


ಕಂಠಾಭರಣಕ್ಕೂ ಮಿಗಿಲಾದ ಕಂಠಗಳಿಂದ ಸಖಿಯರು ನುಡಿದ ಈ ಮಾತುಗಳು ಜಯದೇವ ಕವಿಯಿಂದ ರಚಿತವಾದವು. ಹರಿಯಲ್ಲಿ ಮನಸ್ಸನ್ನು ನೆಟ್ಟಿರುವವರ ಕಂಠದಲ್ಲಿ ಅವನು ನೆಲೆಸಲಿ.



*ಪರಮೇಶ್ವರ ಭಟ್ಟರ ಕನ್ನಡ ರೂಪ*

ಅಷ್ಟಪದಿ ೨೦


ಮುಗ್ಧೆಯೆ ನಿನಗೊಲಿದೈತಂದಾ ಮಧುಮಥನನ ನೀನನುಸರಿಸು ನಡೆ ಮಾಧವನನುನಯದಿನಿನುಡಿಗಳನಿಂದಾಡಿಹನಡಿಗಳಿಗಿಂದವನೆರಗಿಹನು ಹಿಮಸಮಶೀತಳಮಂಜುಳವಂಜುಳ ತಳದೊಳು ಕೇಳೀಶಯನದೊಳಿರುತಿಹನು. 1


ಘನಜಘನಸ್ತನಭಾರದೆ ಸರಸರನಡೆವುದಕಾಗದಿರೇತಕೆ ಚಿಂತಿಪುದು

ಮಣಿಮಂಜೀರವು ಘಲಿಘಲಿರೆನುತಿರೆ ನೀನರಸಂಚೆಯತೆರನಿರದೈದುವುದು. 2


ಕೇಳಹ ತರುಣಿಯರನು ಸಲೆ ಮೋಹಿಸುವಂತಹ ಸುಂದರಮಧುಪ ವಿರಾವವನು

ಕುಸುಮ ಶರಾಸನ ಶಾಸನ ಬಂದಿನಿವೋಲಿಹ ಪಿಕನಿಕರದೊಳಿಡು ಭಾವವನು. 3


ಎಲರೊಳು ತೊನೆಯುವ ತಳಿರಿನ ನಿಕರವೆ ಕರವೆನಲೆಳಲತೆಗಳ ನಿಕುರುಂಬವನು

ನೋಡಹ ಗತಿಯನು ಚೋದಿಸುತಿರುವುದು ಹೇ ಕರಬೋರುವೆ ಮಾಣು ವಿಲಂಬವನು. 4


ತೊಳಗುವನ೦ಗತರಂಗದ ಕತದೊಳು ಸೂಚಿಸುತಿಹುದಿದು ಹರಿ ಪರಿರಂಭವನು ಕೇಳು ಮನೋಹರ ಹಾರವಿನಿರ್ಮಲ ಜಲಧಾರೆಗಳೆಸೆವೀ ಕುಚ ಕುಂಭವನು. 5


ಅಖಿಲ ಸಖೀಜನ ಬಳಸುತಲಿರೆಯಿರೆ ತನುವಿದು ಸಜ್ಜಾಗಿರುವುದು ರತಿರಣಕೆ ಚಂಡಿಯೆ ನಿನದಿಪ ರಶನಾರವಡಿಂಡಿಮದೊಡವೆರೆದಭಿಸರದೊಳು ಬಿಡು ನಾಣೇಕೆ. 6


ಸ್ಮರಶರಸುಂದರ ನಖವಿಹ ಕರದೊಳು ಸಖಿಯನು ಕೈಹಿಡಿದಾಟದೊಳೆಲಗೆ ನಡೆ ಕೈಬಳೆಗಳ ಘಲಿಘಲಿರುಲಿಯೊಳು ಹರಿಯನು ಎಚ್ಚರಿಸಾತನು ಬರುವನು ಬೇಟದೆಡೆ. 7


ಕಂಠಾಭರಣಕೆ ಮಿಗಿಲಿದು ಸತಿಯರ ಕಂಠಾಶ್ಲೇಷಕೆ ಸಹ ಮಿಗಿಲೆನಲು 

ಶ್ರೀ ಜಯದೇವನ ನುಡಿಯಿದು ನೆಲಸಲಿ ಹರಿಯೊಳು ಮನ ನೆಟ್ಟಿರುವರ ಕಂಠದೊಳು. 8



*ಮೂಲರೂಪ*

ಏಕಾದಶ ಸರ್ಗಃ ಸಾನಂದ ದಾಮೋದರಮ್


ಸುಚರಮನುನಯನ ಪ್ರೀಣಯಿತ್ವಾ ಮೃಗಾಕ್ಷೀಂ 

ಗತವತಿ ಕೃತವೇಶ ಕೇಶವೇ ಕುಂಜಶಯ್ಯಾಂ 

ರವಿರುಚಿರವಿಭೂಷಾಂ ದೃಷ್ಟಿ ಮೋಕ್ಷೇ ಪ್ರದೋಷೇ 

ಸ್ಫುರತಿ ನಿರವಸಾದಾಂ ಕಾಽಪಿ ರಾಧಾಂ ಜಗಾದ ||೧||


ಗೀತಂ _ಅಷ್ಟಪದೀ_ 20_ ಶ್ರೀ ಹರಿತಾಲ ರಾಜಿಜಲಧರ ವಿಲಸಿತಮ್

ವಸಂತರಾಗ, ಯತಿಕಾಲ


ವಿರಚಿತಚಾಟುವಚನರಚನಂ ಚರಣೇ ರಚಿತಪ್ರಣಿಪಾತಂ

ಸಂಪ್ರತಿ ಮಂಜುಲವಂಜುಲಸೀಮನಿ ಕೇಲಿಶಯನಮನುಯಾತಂ

ಮುಗ್ಧೇ ಮಧುಮಥನಮನುಗತಮನುಸರ ರಾಧಿಕೇ  ||ಧ್ರುವಮ್ ||  ೧


ಘನಜಘನಸ್ತನಭಾರಭರೇ ದರಮಂಥರಚರಣವಿಹಾರಂ ಮುಖರಿತಮಣಿಮಂಜೀರಮುಪೈಹಿ ವಿಧೇಹಿ ಮರಾಲವಿಕಾರಂ  ೨


ಶೃಣು ರಮಣೀಯತರಂ ತರುಣೀಜನಮೋಹನಮಧುರಿಪುರಾವಂ 

ಕುಸುಮಶರಾಸನಶಾಸನವಂದಿನಿ ಪಿಕನಿಕರೇ ಭಜ ಭಾವಂ ೩


ಅನಿಲತರಲಕಿಸಲಯನಿಕರೇಣ ಕರೇಣ ಲತಾನಿಕುರಂಬಂ 

ಪ್ರೇರಣಮಿವ ಕರಭೋರು ಕರೋತಿ ಗತಿಂ ಪ್ರತಿಮುಂಚ ವಿಲಂಬಂ  ೪


ಸ್ಪುರಿತಮನಂಗತತರಂಗವಶಾದಿವ ಸೂಚಿತಹರಿಪರಿರಂಭಂ

ಪೃಚ್ಛ ಮನೋಹರಹಾರವಿಮಲಜಲಧಾರಮಮುಂ ಕುಚಕುಂಭಂ  ೫


ಅಧಿಗತಮಖಿಲಸಖೀಭಿರಿದಂ ತವ ವಪುರಪಿ ರತಿರಣಸಜ್ಜಂ 

ಚಂಡಿ ರಣಿತರಶನಾರವಡಿಂಡಿಮಮಭಿರಸ ಸರಸಮಲಜ್ಜಂ  ೬


ಸ್ಮರಶರಸುಭಗನಖೇನ ಸಖೀಮವಲಂಬ್ಯ ಕರೇಣ ಸಲೀಲಂ ಚಲವಲಯಕ್ಕಣಿರವಬೋಧಯ ಹರಿಮಪಿ ನಿಗದಿತಶೀಲಂ  ೭


ಶ್ರೀಜಯದೇವಭಣಿತಮಧರೀಕೃತಹಾರಮುದಾಸಿತಭಾವಂ 

ಹರಿವಿನಿಹಿತ ಮನಸಾಮಧಿತಿಷ್ಟತು ಕಂಠತಟೀಮವಿರಾಮಂ  ೮


ಸಾ ಮಾಂ ದ್ರಕ್ಷ್ಯತಿ ವಕ್ಷ್ಯತಿ ಸ್ಮರಕಥಾಂ ಪ್ರಶ್ನಂಗಮಾಲಿಂಗನೈಃ

ಪ್ರೀತಿಂ ಯಾಸ್ಕತಿ ರಂಸ್ಯತೇ ಸಖಿ ಸಮಾಗತ್ಯೇತಿ ಚಿಂತಾಕುಲ: ೯


ಸ ತ್ವಾಂ ಪಶ್ಯತಿ ವೇಪತೇ ಪುಲಕಯತ್ನಾನಂದತಿ ಸ್ವಿದ್ಯತಿ ಪ್ರತ್ಯುದ್ಗಚ್ಛತಿ ಮೂರ್ಚ್ಛತಿ ಸ್ಥಿರತಮಃಪುಂಜೇ ನಿಕುಂಜೇ ಪ್ರಿಯಃ ೧೦


ಅಕ್ಷ್ಣೋರ್ನಿಕ್ಷಿಪದಂಜನಂ ಶ್ರವಣಯೋಸ್ತಾಪಿಂಛಗುಚ್ಛಾವಲೀಂ ಮೂರ್ಧ್ನಿ ಶ್ಯಾಮಸರೋಜದಾಮ ಕುಚಯೋ: ಕಸ್ತೂರಿಕಾಪತ್ರಕಂ ಧೂರ್ತಾನಾಮಭಿಸಾರಸಂಭ್ರಮಜುಷಾಂ ವಿಷ್ಟಙ್ನಿಕುಂಜೇ ಸಖಿ

ಧ್ವಾಂತಂ ನೀಲನಿಚೋಲಚಾರು ಸುದೃಶಾಂ ಪ್ರತ್ಯಂಗಮಾಲಿಂಗತಿ  ೧೧


ಕಾಶ್ಮೀರಗೌರವಪುಷಾಮಭೀಸಾರಿಕಾಣಾ - 

ಮಾಬದ್ಧರೇಖಮಭಿತೋರುಚಿಮಂಜರೀಭಿಃ

ಏತತ್ತ ಮಾಲದಲನೀಲತಮಂ ತಮಿಸ್ರಂ ತತ್ರ್ಪೇಮಹೇಮನಿಕಷೋಪಲತಾಂ ತನೋತಿ  ೧೨


 ಹಾರಾವಲೀತರಲಕಾಂಚನಕಾ೦ಚಿದಾಮ _

ಕೇಯೂರಕಂಕಣಮಣಿದ್ಯುತಿದೀಪಿತಸ್ಯದ್ವಾರೇ ನಿಕುಂಜನಿಲಯಸ್ಯ ಹರಿಂ ನಿರೀಕ್ಷ್ಯ

ವ್ರೀಡಾವತೀಮಥ ಸಖೀಮಿಯಮಿತ್ಯು ವಾಚ. ೧೩


ಕೃತಜ್ಞತೆ:

1. ಮೂಲ: ಜಯದೇವ ಕವಿಯ 'ಗೀತಗೋವಿಂದ'

 2.‍ ಎಸ್. ವಿ. ಪರಮೇಶ್ವರ ಭಟ್ಟರ ಕನ್ನಡ ಕಾವ್ಯರೂಪ

3. ಸಂಕ್ಷಿಪ್ತ ಭಾವ ನೀಡಿದ: ಸುಬ್ಬುಲಕ್ಷ್ಮಿ Lrphks Kolar



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ