ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಗೇಶ್ ಡಿ.ಸಿ.


 ಡಿ. ಸಿ. ನಾಗೇಶ್

ಇಂದು ಡಿ. ಸಿ. ನಾಗೇಶ್ ಅವರ ಸಂಸ್ಮರಣೆ ದಿನ. 

ಡಿ.ಸಿ ನಾಗೇಶ್ ಹಲವು ದಶಕಗಳ ಕಾಲ ಸಿನಿಮಾ ಪತ್ರಿಕೋದ್ಯಮದಲ್ಲಿ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದವರು. ಕನ್ನಡದ ಬಹುತೇಕ ನಟ, ನಟಿಯರ ಫೋಟೋಗಳನ್ನು ಸೆರೆ ಹಿಡಿದ ಹೆಗ್ಗಳಿಕೆ ಇವರದ್ದು. ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ ನಾಗೇಶ್, ಹಿರಿಯ ಕಲಾವಿದರ ಜೊತೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದವರು. ಅಲ್ಲದೇ, ಕಿರಿಯ ಸಿನಿಮಾ ಪತ್ರಕರ್ತರಿಗೆ ಮಾರ್ಗದರ್ಶಕರು ಆಗಿದ್ದವರು.

ನಾಗೇಶ್ 2022ರ ಫೆಬ್ರುವರಿ 5ರಂದು ತಮ್ಮ 66ನೇ ವಯಸ್ಸಿನಲ್ಲಿ ನಿಧನರಾದರು.  

ಪತ್ರಕರ್ತ ಚೇತನ್ ನಾಡಿಗೇರ Chetan Nadiger ಸಂಪಾದನೆ ಮಾಡಿರುವ ಡಿ.ಸಿ ನಾಗೇಶ್ ಕುರಿತಾದ 'ಜೀವಬಿಂಬ’ ಕೃತಿ ಪ್ರಕಟಗೊಂಡಿದೆ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ