ಕಾರೈಕುಡಿ ಆರ್.ಮಣಿ
ಕಾರೈಕುಡಿ ಆರ್.ಮಣಿ
ಕಾರೈಕುಡಿ ಆರ್.ಮಣಿ ಮೃದಂಗ ವಾದಕರಾಗಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕರ್ನಾಟಕ ಸಂಗೀತ ಲೋಕವನ್ನು ಆಳಿದವರು. ಬಹುಪಾಲು ಕರ್ನಾಟಕ ಅಭಿಜ್ಞರು ಮತ್ತು ಅಭಿಮಾನಿಗಳು ಅವರನ್ನು ಶ್ರೇಷ್ಠ ಮೃದಂಗ ವಾದಕರಲ್ಲಿ ಒಬ್ಬರೆಂದು ಪರಿಗಣಿಸಿದ್ದಾರೆ.
ಕಾರೈಕುಡಿ ಮಣಿ ಅವರು 11 ಸೆಪ್ಟೆಂಬರ್ 1945 ರಂದು ಕಾರೈಕುಡಿಯಲ್ಲಿ ಜನಿಸಿದರು. ಅವರ ಅಂದಿನ ಹೆಸರು ಗಣಪತಿ ಸುಬ್ರಮಣ್ಯಂ.
ಮಣಿ ಮೊದಲು ಕಾರೈಕುಡಿ ರಂಗ ಅಯ್ಯಂಗಾರ್ ಅವರಿಂದ ಸಂಗೀತ ಕಲಿತರು. ನಂತರ ವಿಕ್ಕು ವಿನಾಯಗರಾಮ್ ಅವರ ತಂದೆ ಹರಿಹರ ಶರ್ಮಾ ಅವರಿಂದ ಸಂಗೀತವನ್ನು ಕಲಿತರು. ಅವರು ಮತ್ತು ಮಣಿ ಅನೇಕ ಪಾಶ್ಚಾತ್ಯ ತಾಳವಾದ್ಯಗಾರರೊಂದಿಗೆ ಸಹಯೋಗ ನೀಡಿದ್ದರು. ಅವರು ಕೆ.ಎಂ.ವೈದ್ಯನಾಥನ್ ಅವರಿಂದ ಕೂಡ ಮತ್ತಷ್ಟು ಶಿಕ್ಷಣ ಪಡೆದರು.
ಮಣಿ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಎಂ.ಎಸ್. ಸುಬ್ಬುಲಕ್ಷ್ಮಿ, ಡಿ. ಕೆ. ಪಟ್ಟಮ್ಮಾಳ್, ಎಂ.ಎಲ್. ವಸಂತಕುಮಾರಿ, ಮಧುರೈ ಸೋಮಸುಂದರಂ, ಟಿ.ಎಂ. ತ್ಯಾಗರಾಜನ್, ಡಿ.ಕೆ.ಜಯರಾಮನ್, ಲಾಲ್ಗುಡಿ ಜಯರಾಮನ್, ಹಾಗೆಯೇ ಇಂದಿನ ತಾರೆಯರಾದ ಸಂಜಯ್ ಸುಬ್ರಮಣಿಯನ್, ಟಿ.ಎಂ. ಕೃಷ್ಣ, ಮೈಸೂರು ನಾಗರಾಜ್ - ಮಂಜುನಾಥ್ ಸಹೋದರರ ವರೆಗೆ ಹಲವು ತಲೆಮಾರುಗಳ ಸಂಗೀತಗಾರರಿಗೆ ಮೃದಂಗ ನುಡಿಸಿದ್ದರು. ಮಣಿ ಅವರ ವಾದನವು ಇಡೀ ಸಂಗೀತ ಕಚೇರಿಗಳನ್ನು ಅಲಂಕರಿಸವುದು ಎಂದು ಕಲಾವಿದರು ಹೇಳುತ್ತಿದ್ದರು. ಪಿತುಕುಳಿ ಮುರುಗದಾಸ್ ಅವರ ಭಕ್ತಿಗೀತೆಗಳಿಗೆ ಮಣಿ ನೀಡಿರುವ ಪಕ್ಕವಾದ್ಯವು ಅವರ ಅದ್ಭುತ ಪ್ರತಿಭೆಗೆ ಸಾಕ್ಷಿಯಾಗಿದೆ. ಅವರು ರಾಗಗಳು ಮತ್ತು ಕೀರ್ತನೆಗಳಲ್ಲಿಯೂ ಸಹ ಪಾರಂಗತರಾಗಿದ್ದರು. ಫ್ಯೂಷನ್ ಸಂಗೀತದಲ್ಲೂ ಅಪಾರ ಸಾಧನೆ ಮಾಡಿದ್ದರು.
ಕಾರೈಕ್ಕುಡಿ ಮಣಿ ಅವರಿಗೆ 18ನೇ ವಯಸ್ಸಿನಲ್ಲೇ ರಾಷ್ಟ್ರಪತಿ ಡಾ. ಎಸ್ ರಾಧಾಕೃಷ್ಣನ್ ಅವರಿಂದ ರಾಷ್ಟ್ರೀಯ ಪ್ರಶಸ್ತಿ ಸಂದಿತ್ತು. ತಮಗೆ ಪ್ರಶಸ್ತಿ ಗಳಿಕೆಯ ಹಂಬಲವಿಲ್ಲ ಎನ್ನುತ್ತಿದ್ದ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಗೌರವಗಳು ಸಂದಿತ್ತು.
ಕಾರೈಕ್ಕುಡಿ ಮಣಿ 2023ರ ಮೇ 4ರಂದು ನಿಧನರಾದರು.
Respects to departed soul great Mrudanga Vidwan Karaikudi R Mani
ಕಾಮೆಂಟ್‌ಗಳು