ಕೆ. ಷರೀಫಾ
ಕೆ.ಷರೀಫಾ
ಡಾ. ಕೆ. ಷರೀಫಾ ಕನ್ನಡದ ಸಂವೇದನಾಶೀಲ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.
ಕೆ.ಷರೀಫಾ ಅವರು 1957 ಮೇ 5 ರಂದು ಗುಲಬರ್ಗಾದಲ್ಲಿ ಜನಿಸಿದರು. ತಂದೆ ಬಾಬುಮಿಯಾ, ತಾಯಿ ಪುತಲೀಬೇಗಂ.
ಷರೀಫಾ ಅವರು ಕೃಷಿ ಮಾರುಕಟ್ಟೆ ಇಲಾಖೆಯಲ್ಲಿ ಮಾರುಕಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. 'ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳಾ ಸಂವೇದನೆ' ಎಂಬ ಅವರ ಮಹಾ ಪ್ರಬಂಧಕ್ಕೆ ಪಿಎಚ್.ಡಿ ಸಂದಿದೆ.
ಕೆ.ಷರೀಫಾ ಅವರೂ ಕನ್ನಡದಲ್ಲಿ 25ಕ್ಕೂ ಹೆಚ್ಚು ಕೃತಿ ಬರೆದು ಹೆಸರಾಗಿದ್ದಾರೆ.
ಬಿಡುಗಡೆಯ ಕವಿತೆಗಳು, ನೂರೇನ್‌ಳ ಅಂತರಂಗ, ಸಂತಳ ಜೋಳಿಗೆಯ ರೊಟ್ಟಿ, ಪಾಂಚಾಲಿ, ಮಮ್ತಾಜಳ ಮಹಲು, ಬತ್ತಳಿಕೆ, ಬುರ್ಖಾ ಪ್ಯಾರಡೈಸ್, ಮಿರ್ಜಾ ಗಾಲಿಬ್, ನೀರೊಳಗಣ ಕಿಚ್ಚು, ಅಮ್ಮ ಮತ್ತು ಯುದ್ಧ (ವಿಮರ್ಶೆ), ಸಂವೇದನೆ (ವಿಮರ್ಶೆ), ಮಹಿಳಾ ಮಾರ್ಗ (ಸಹ ಸಂಪಾದನೆ), ಮಹಿಳಾ ಮಾರ್ಗ: ಗೀತಾ ನಾಗಭೂಷಣ (ಸಹ ಸಂಪಾದನೆ), 'ಹೊನ್ನಾರು ಒಕ್ಕಲು' ರೈತ ಆಂದೋಲನದ ಕವಿತೆಗಳು (ಸಹ ಸಂಪಾದನೆ), ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳಾ ಸಂವೇದನೆ (ಸಂಶೋಧನೆ), ಹೊಸ ಶತಮಾನದ ಕಾವ್ಯ (ಸಂಪಾದನೆ) ಮುಂತಾದವು ಇವುಗಳಲ್ಲಿ ಸೇರಿವೆ.
ಷರೀಫಾ ಅವರಿಗೆ ಮಹಿಳೆ ಮತ್ತು ಸಮಾಜ ಪ್ರಶಸ್ತಿ, ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಶ್ರೀ ಪ್ರಶಸ್ತಿ, 2019ನೇ ಸಾಲಿನ ಕ.ಸಾ.ಪ ದ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿ ದೊರೆತಿದೆ. ಅವರ 'ನೀರೊಳಗಣ ಕಿಚ್ಚು’ ಕೃತಿಗೆ 2022ರ 'ಈ ಹೊತ್ತಿಗೆ' ಕಥಾ ಪ್ರಶಸ್ತಿ ಸಂದಿತ್ತು.
Birthday wishes to K. Sharifa
ಕಾಮೆಂಟ್‌ಗಳು