ಸ್ಪರ್ಶ
ಸ್ಪರ್ಶ
ಸ್ಪರ್ಶ ನಮ್ಮ ಕನ್ನಡ ನಾಡಿನ ಬಹುಮುಖಿ ಪ್ರತಿಭೆ. ಪ್ರಮುಖವಾಗಿ ಅವರು ಗಾಯಕಿ. ಇವರ ಪ್ರತಿಭೆ ಸಿನಿಮಾ ಸಂಗೀತ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ನೃತ್ಯ, ಚಿತ್ರಕಲೆ, ಪಾತ್ರಾಭಿನಯ, ಪಾತ್ರಗಳಿಗೆ ಧ್ವನಿ ನೀಡಿಕೆ ಹೀಗೆ ಬಗೆ ಬಗೆಯಲ್ಲಿ ಹೊರಹೊಮ್ಮುತ್ತ ಸಾಗಿದೆ.
ಜೂನ್ 1 ಸ್ಪರ್ಶ ಅವರ ಜನ್ಮದಿನ. ಸ್ಪರ್ಶ ಅವರ ಬೆಳವಣಿಗೆಯ ಹಿಂದೆ ಅವರ ಅಮ್ಮ, ನಮ್ಮೆಲ್ಲರ ಅಚ್ಚುಮೆಚ್ಚಿನ ಬರಹಗಾರ್ತಿ, ಪ್ರಾಧ್ಯಾಪಕಿ, ಬಹುಕಲಾ ತಜ್ಞರಾದ ಎಂ. ಆರ್. ಕಮಲಾ Metikurke Ramaswamy Kamala ಅವರ ಛಾಯೆಯಿದೆ. ಸ್ಪರ್ಶ ಅವರು ವಿಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಸಾಧನೆ ಮಾಡಿದ್ದಾರೆ.
ಸ್ಪರ್ಶ ಶಾಲಾ ದಿನಗಳಿಂದಲೇ ಕಲಾಭಿರುಚಿ ಮೂಡಿಸಿಕೊಂಡರು. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳನ್ನು ಕಲಿತರು. ಕರ್ನಾಟಕ ಸಂಗೀತ ಪರಿಚಯವೂ ಇದೆ. ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಚಿತ್ರಕಲೆ ಅವರ ನಿರಂತರ ಜೊತೆಗಾತಿಯೇ ಆಗಿತ್ತು. ಅಮ್ಮನ ಸಾಹಿತ್ಯ ಸ್ಪರ್ಶದ ಸಿಂಚನವೂ ಸದಾ ಜೊತೆಗಿದೆ.
ಸ್ಪರ್ಶ 'ಎದೆ ತುಂಬಿ ಹಾಡಿದೆನು'ನಲ್ಲಿ ರನ್ನರ್ ಅಪ್ ಆಗಿದ್ರು. ಅವರು ಕನ್ನಡದಲ್ಲಿ ಅನೇಕ ಚಲನ ಚಿತ್ರಗಳಿಗೆ ಹಾಡಿದ್ದಾರೆ. ಇತರ ಭಾಷೆಗಳಿಗೂ ಹಾಡಿದ್ದಾರೆ. ಚಲನಚಿತ್ರಗಳಿಗೆ ಧ್ವನಿ ಕಲಾವಿದರಾಗಿದ್ದಾರೆ. ಮಣಿರತ್ನಂ ಅಂತಹ ಮೇರು ನಿರ್ದೇಶಕರ ಪರೀಕ್ಷೆಗಳಲ್ಲಿ ಗೆದ್ದು ಅವರ ಚಿತ್ರಗಳಿಗೆ ಧ್ವನಿ ಆಗಿದ್ದಾರೆ. ಕಿರುತೆರೆ ಮತ್ತು ಚಲನಚಿತ್ರಗಳ ಮಂದಿ ಇವರನ್ನು ಅಭಿನಯ ಕ್ಷೇತ್ರಕ್ಕೂ ತಂದಿದ್ದಾರೆ. ಸಂಗೀತ ಕಾರ್ಯಕ್ರಮ, ಧ್ವನಿ ಮುದ್ರಿಕೆ ಹೀಗೆ ಹಲವು ಕಲಾಕ್ಷೇತ್ರಗಳಲ್ಲಿ ಸ್ಪರ್ಶ ಇದ್ದಾರೆ.
ಸ್ಪರ್ಶ ಅವರ ಮಾಂತ್ರಿಕ ಕಲಾಸ್ಪರ್ಶ ಅವರ ಕಲಾಲೋಕವನ್ನು ಬೆಳಗಿರುವಂತೆಯೇ ಅವರ ಬದುಕನ್ನೂ ಸದಾ ಬೆಳಗಿರಲಿ. ಸ್ಪರ್ಶ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Sparsha Rk
ಕಾಮೆಂಟ್‌ಗಳು