ಥಾಮಸ್ ಬ್ರೌನ್
ಥಾಮಸ್ ಬ್ರೌನ್
On the birth Anniversary of Sir Thomas Browne Sir Thomas Browne, an English polymath and author of varied works which reveal his wide learning in diverse fields including science and medicine, religion and the esoteric.
ಥಾಮಸ್ ಬ್ರೌನ್ ಇಂಗ್ಲಿಷ್ ಸಾಹಿತಿ.
ಥಾಮಸ್ ಬ್ರೌನ್ 1605ರ ಅಕ್ಟೋಬರ್ 19ರಂದು ಜನಿಸಿದರು. ಆಕ್ಸ್'ಫರ್ಡಿನಲ್ಲಿ ವಿದ್ಯಾಭ್ಯಾಸಮಾಡಿ 1626ರಲ್ಲಿ ಬಿ.ಎ. ಪದವಿಯನ್ನೂ 1629ರಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಲೇಡ್ನನಲ್ಲಿ ವೈದ್ಯಶಾಸ್ತ್ರದ ಬಗ್ಗೆ ಅಧ್ಯಯನ ನಡೆಸಿ 1633ರಲ್ಲಿ ಎಂ.ಡಿ. ಪದವಿ ಗಳಿಸಿದರು.
ಥಾಮಸ್ ಬ್ರೌನ್ ಮುಂದೆ ಹ್ಯಾಲಿಫಾಕ್ಸ್‍ಗೆ ಹಿಂದಿರುಗಿ ವೈದ್ಯಕೀಯ ವೃತ್ತಿಯಲ್ಲಿ ನಿರತರಾದರು. ಇಲ್ಲಿದ್ದ ಸಂದರ್ಭದಲ್ಲಿ 'ರಿಲಿಜಿಯೋ ಮಿಡಿಚಿ' ಎಂಬ ಕಾವ್ಯ ರಚಿಸಿದ್ದರಾದರೂ ಅದು ಪ್ರಕಟವಾದದ್ದು 1643ರಲ್ಲಿ. ರಿಲಿಜಿಯೊ ಮೆಡಿಚಿಯಲ್ಲಿ ಧಾರ್ಮಿಕ ನಂಬಿಕೆಗಳನ್ನು ಸ್ಫುಟಗೊಳಿಸುವ ಪ್ರಯತ್ನ ಮಾಡಿದ್ದಾರೆ. ಹೈಡ್ರಿಯೋಟೇಫಿ ಆರ್ ಅರ್ನ್ ಬರಿಯಲ್ (1658) ಇವರ ಇನ್ನೊಂದು ಪ್ರಸಿದ್ಧ ಕೃತಿ. ಸಾವು ಮತ್ತು ಶಾಶ್ವತತೆ ಕುರಿತು ಈ ಕೃತಿಯಲ್ಲಿ ಗಾಢವಾಗಿ ಚಿಂತಿಸಿದ್ದಾರೆ. ಇವರ ಶೈಲಿ ಗಂಭೀರವಾದುದು. ಲ್ಯಾಟಿನ್ ಪದಗಳಲ್ಲಿ ಇವರಿಗೆ ಹೆಚ್ಚು ಆದರವಿತ್ತು. ಬರಹಗಳಲ್ಲಿ ಉದ್ದವಾದ ಮತ್ತು ಸೊಗಸೆನಿಸುವ ಪದ ವೈಭವ ಕಾಣಬರುತ್ತದೆ. ಆದರೆ ಇವು ದಿನನಿತ್ಯದ ಅಗತ್ಯಗಳಿಗಿಂತ ಬಹುದೂರದ ಲಯ ಮತ್ತು ಶಬ್ದ ಸಾಮರಸ್ಯಗಳ ವಿಷಯದಲ್ಲಿ ವಿಶೇಷ ಎಚ್ಚರಿಕೆ ವಹಿಸಿದ್ದಾರೆ. ಆದ್ದರಿಂದ ಇವರ ಗದ್ಯ ಶೈಲಿ ಒಮ್ಮೊಮ್ಮೆ ಕಾವ್ಯವನ್ನು ಸಮೀಪಿಸುತ್ತದೆ.
ಥಾಮಸ್ ಬ್ರೌನ್ ರಾಜನಿಗೂ ಸಂಸತ್ತಿಗೂ ಯಾದವೀಕಲಹವಾದಾಗ ರಾಜನ ಪಕ್ಷ ವಹಿಸಿದರು. 1671ರಲ್ಲಿ ರಾಜನು ಇವರಿಗೆ ನೈಟ್ ಹುಡ್ ಪ್ರಶಸ್ತಿಯನ್ನು ನೀಡಿದ.
ಬ್ರೌನ್ ಅವರ ಗದ್ಯ ಸಾಹಿತ್ಯವು ಹತ್ತೊಂಬತ್ತನೆಯ ಶತಮಾನದ ಹಾಲ್ರ್ಸ್ ಲ್ಯಾಂಬ್, ಕೋಲ್‍ರಿಜ್ ಮತ್ತು ಡಿಕ್ವಿನ್ಸ್ ಮೊದಲಾದ ಬರಹಗಾರರ ಮೇಲೆ ಪ್ರಭಾವ ಬೀರಿತು.
ಥಾಮಸ್ ಬ್ರೌನ್ 1682 ಆಕ್ಟೋಬರ್ 19ರಂದು ನಾರ್‍ವಿಚ್‍ನಲ್ಲಿ ನಿಧನರಾದರು.
ಅವರ ಒಂದು ಕವಿತೆ ಇಲ್ಲಿದೆ:
The Dormititve
The night is come; like to the day
Depart not Thou, great God, away.
Let not my sins, black as the night,
Eclipse the lustre of thy light.
Keep still in my horizon; for to me
The sun makes not the day, but Thee.
Thou whose nature cannot sleep,
On my temples sentry keep;
Guard me 'gainst those watchful foes
Whose eyes are open while mine close.
Let no dreams my head infest,
But such as Jacob's temples blest.
While I do rest my soul advance,
Make my sleep a holy trance:
That I may, my rest being wrought,
Awake into some holy thought.
And with as active vigour run
My course as doth the nimble sun.
Sleep is a death; O make me try,
By sleeping what it is to die!
And as gently lay my head
On my grave, as now my bed.
Howe'er I rest, great God, let me
Awake again at last with Thee.
And thus assured, behold I lie
Securely, or to wake or die.
These are my drowsy days; in vain
I do now wake to sleep again:
O come that hour, when I shall never
Sleep again, but wake for ever.
ಕಾಮೆಂಟ್‌ಗಳು