ಸಾಯಿ ಪ್ರಕಾಶ್
ಸಾಯಿ ಪ್ರಕಾಶ್
ಸಾಯಿ ಪ್ರಕಾಶ್ ಅವರು ಆರ್ಥಿಕ ತಜ್ಞರಾಗಿ ಮಹತ್ವದ ಸೇವೆ ಸಲ್ಲಿಸಿದವರಾಗಿದ್ದು, ಸಮಾಜಮುಖಿಯಾಗಿಯೂ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ.
ಸಾಯಿ ಪ್ರಕಾಶ್ ಅವರು 1954ರ ಜೂನ್ 1ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನ ಆರ್.ವಿ. ಶಾಲೆಯಲ್ಲಿ ಓದಿದ ನಂತರ ಸೈಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಬಿ.ಎಸ್‍ಸಿ ಪದವಿ ಪಡೆದರು. ಮುಂದೆ ಪತ್ರಿಕೋದ್ಯಮ ಡಿಪ್ಲೋಮಾ, ಸಾರ್ವಜನಿಕ ಸಂಪರ್ಕ ವಿಷಯಗಳಲ್ಲಿ ಡಿಪ್ಲೋಮಗಳನ್ನು ಗಳಿಸಿದರಲ್ಲದೆ ಡಬ್ಲಿನ್‍ನಲ್ಲಿನ ಟ್ರಿನಿಟಿ ಕಾಲೇಜಿನಿಂದ ಎಂ.ಬಿ.ಎ. ಪದವಿ ಗಳಿಸಿದರು.
ಸಾಯಿ ಪ್ರಕಾಶ್ ಅವರು ಸೌತ್ ಈಸ್ಟರ್ನ್ ರೋಡ್ವೇಸ್ ಸಂಸ್ಥೆಯ ಅಧಿಕಾರಿಗಳಾಗಿ, ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ ಡೆಪ್ಯೂಟಿ ಸೆಕ್ರೆಟರಿ ಆಗಿ ಸೇರಿ, ಮುಂದೆ ಅಲ್ಲಿನ ನಿರ್ದೇಶಕರಾಗಿ, 'ದ ಸಿಟಿ ಟ್ಯಾಬ್' ಪ್ರಧಾನ ಅಧಿಕಾರಿಯಾಗಿ, ಕರ್ನಾಟಕ ಡಯೋಸ್ಪರ ಸೆಲ್ ಸಮನ್ವಯಕಾರರಾಗಿ, ಸಿಐಐನ ಸಿಎಸ್ಆರ್ ಮತ್ತು ಎಎ ಪ್ಯಾನೆಲ್ನ ಸಮನ್ವಯಕಾರರಾಗಿ ಮುಂತಾದ ಹಲವಾರು ಹಿರಿಯ ಜವಾಬ್ದಾರಿಗಳನ್ನು ನಿರ್ವಹಿಸಿದ ತಜ್ಞರು. ಬ್ಯಾಂಕಿಂಗ್, ಕಾರ್ಯಕ್ರಮ ನಿರ್ವಹಣೆ, ಕ್ರೀಡಾ ಪೋಷಣೆ, ಪತ್ರಿಕಾ ಸಂಪರ್ಕ ಹೀಗೆ ಹಲವು ಕ್ಷೇತ್ರಗಳಲ್ಲಿಯೂ ಅವರ ತಜ್ಞ ಕೊಡುಗೆ ಸಂದಿದೆ. ಇವರು ಚೆಸ್ ಇಂಡಿಯಾ ಎಂದು ಹೆಸರಾಗಿದ್ದು ಮುಂದೆ ಚೆಸ್ ಇಂಟರ್ನ್ಯಾಷನಲ್ ಕ್ಲಬ್ ಎಂದಾಗಿರುವ ಸಂಸ್ಥೆಯ ಸಂಸ್ಥಾಪಕ ಮುಖ್ಯಸ್ಥರಾಗಿದ್ದಾರೆ.
ಸಾಯಿ ಪ್ರಕಾಶ್ ಅವರು ಎರಿನ್ ಕನ್ಸಲ್ಟೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರಧಾನ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದು, ಆ ಸಂಸ್ಥೆಯ ಸಾಮಾಜಿಕ ಕಾಳಜಿಗಳ ನಿರ್ವಹಣೆಗಾಗಿನ ಎರಿನ್ ಫೌಂಡೇಷನ್ನಿನ ಸಂಸ್ಥಾಪಕರಾಗಿದ್ದು ಆ ಸಂಸ್ಥೆಯ 'ಪರಿವರ್ತನೆ' ಯೋಜನೆಯ ಮೂಲಕ ಅನೇಕ ಜನಪರ ಕಾರ್ಯಕ್ರಮಗಳಿಗೆ ಇಂಬುಕೊಟ್ಟಿದ್ದಾರೆ. ಆನೇಕಲ್ ವಲಯದ ಸಿಎಸ್ಆರ್ ಸಂಘಟನೆಯ ಸಂಚಾಲಕರಾಗಿ ಸಾಮಾಜಿಕ ಕಾಳಜಿಗಳ ಚಿಂತನೆ ಮತ್ತು ಸಮಾಜ ಸೇವೆಯ ಕಾರ್ಯಗಳಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ.
ಸಾಯಿ ಪ್ರಕಾಶ್ ಅವರಲ್ಲಿ ದೇಶದ ಆರ್ಥಿಕ-ಸಾಮಾಜಿಕ ಆಗುಹೋಗುಗಳು, ಕ್ರೀಡೆ, ಸಾಹಿತ್ಯ, ಸಂಸ್ಕೃತಿ, ಕಲೆ, ಸಮಾಜದ ಕುರಿತಾದ ಬದ್ಧತೆ, ಅಧ್ಯಾತ್ಮ ಚಿಂತನೆ ಇವೆಲ್ಲ ಹಿತಮಿತವಾಗಿ ಬೆಸೆದಿದೆ.
ಹಿರಿಯರಾದ ಸಾಯಿ ಪ್ರಕಾಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
(This article is written in Kannada. Reading the same in auto translation in English or any other language may not be appropriate)
Happy birthday Sai Prakash Sir 🌷🙏🌷
ಕಾಮೆಂಟ್‌ಗಳು